ದ.ಕ.ಜಿಲ್ಲೆ : ಕೋವಿಡ್ಗೆ ವೃದ್ಧೆ ಬಲಿ
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಬುಧವಾರ ಕೋವಿಡ್ಗೆ 67 ವರ್ಷ ಪ್ರಾಯದ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 1858ಕ್ಕೇರಿದೆ.
ಬುಧವಾರ 9 ಕೋವಿಡ್ ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,36,460 ಕ್ಕೇರಿದೆ. ಅಲ್ಲದೆ ಗುಣಮುಖರಾದವರ ಸಂಖ್ಯೆ 1,34,537ಕ್ಕೇರಿದೆ ಎಂದು ದ.ಕ.ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story