ಮಂಗಳೂರು : ರಸ್ತೆ ಹೊಂಡ ಮುಚ್ಚಲು ಕಲ್ಲು ಹೆಕ್ಕಿ ಹಾಕಿದ ವಿದ್ಯಾರ್ಥಿ

ಮಂಗಳೂರು, ಆ.19: ನಗರದ ಕಂಕನಾಡಿ ಹೂವಿನ ಮಾರುಕಟ್ಟೆ ಬಳಿ ಕಾಂಕ್ರಿಟ್ ರಸ್ತೆಯಂಚಿನಲ್ಲಿ ಹೊಂಡವಾಗಿ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದರೆ, ಪಾದಚಾರಿಗಳ ಕಾಲು ಸಿಲುಕುತ್ತಿದೆ. ಇದನ್ನು ದಿನನಿತ್ಯ ಗಮನಿಸುತ್ತಿರುವ ವಿದ್ಯಾರ್ಥಿಯೊಬ್ಬ ಪಕ್ಕದಿಂದ ಸಣ್ಣ ಕಲ್ಲುಗಳನ್ನು ಹೆಕ್ಕಿ ತಂದು ಹೊಂಡ ಮುಚ್ಚುವ ಪ್ರಯತ್ನ ಮಾಡಿದ್ದಾನೆ.
ಈ ಬಗ್ಗೆ ವಿದ್ಯಾರ್ಥಿ ಮಾತನಾಡಿ, ರಸ್ತೆಯ ಹೊಂಡದಲ್ಲಿ ಬೈಕ್ ಗಳು ನಿಯಂತ್ರಣ ತಪ್ಪಿ ಬೀಳುತ್ತಿವೆ, ಅದನ್ನು ತಡೆಯಲು ಪಕ್ಕದಿಂದ ಸಣ್ಣ ಕಲ್ಲುಗಳನ್ನು ಹೆಕ್ಕಿ ತಂದು ಹೊಂಡ ಮುಚ್ಚುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ.
Next Story





