ಮಂಗಳೂರು; ಸೆ.9ರಂದು ಮೇಯರ್, ಉಪ ಮೇಯರ್ ಚುನಾವಣೆ
ಮಂಗಳೂರು, ಆ.27: ಮಹಾನಗರ ಪಾಲಿಕೆಯ 23ನೆ ಅವಧಿಯ ಮೇಯರ್, ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಸೆ. 9ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಮಾರ್ಚ್ 2ರಂದು ನಿಗದಿಯಾಗಿದ್ದ ಪಾಲಿಕೆಯ 23ನೆ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆ ಕಾನೂನಾತ್ಮಕ ಕಾರಣದಿಂದ ನಡೆದಿಲ್ಲ. ಹಾಗಾಗಿ 22ನೆ ಅವಧಿಯ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಆಗಿ ಸುಮಂಗಳಾ ರಾವ್ ಅವರೇ ಅಧಿಕಾರದಲ್ಲಿದ್ದಾರೆ. ಈ ನಡುವೆ ರಾಜ್ಯ ಸರಕಾರ 24ನೆ ಅವಧಿಗೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿಯನ್ನು ಪ್ರಕಟಿಸಿದೆ.
ಇದೀಗ ಸೆ. 9ರಂದು 23ನೆ ಸಾಲಿನ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದೆ. ಈಗಾಗಲೇ ಸುಮಾರು ಆರು ತಿಂಗಳು ಕಳೆದಿರುವುದರಿಂದ ಹೊಸ ಆಡಳಿತದ ಅವಧಿ ಆರು ತಿಂಗಳು ಕಡಿತವಾಗಲಿದೆ.
Next Story