ರಾಜ್ಯಮಟ್ಟದ ಕರಾಟೆ; ಬುರೂಜ್ ಸ್ಕೂಲ್ ವಿದ್ಯಾರ್ಥಿ ಮೊಹಮ್ಮದ್ ಇನಾಫ್ಗೆ ಚಿನ್ನದ ಪದಕ
ಬಿ.ಸಿ.ರೋಡ್: ಬೆಂಗಳೂರಿನಲ್ಲಿ ಗುರುವಾರ ನಡೆದ 39ನೇ ರಾಜ್ಯಮಟ್ಟದ ಟೇಕ್ವಾಂಡೊ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೊಹಮ್ಮದ್ ಇನಾಫ್ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಪಡೆದು ಕೊಂಡಿರುತ್ತಾನೆ.
ಈತ ಕಲಾಬಾಗಿಲು ರಝಾನಗರದ ಬುರೂಜ್ ಆಂಗ್ಲ ಮಾಧ್ಯಮ ಹೈಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಕರಾಟೆ ಶಿಕ್ಷಕ ಶಿಹಾನ್ ಮೊಹಮ್ಮದ್ ನದೀಮ್ ಇವರಿಂದ ತರಬೇತಿ ಪಡೆಯುತ್ತಿದ್ದಾನೆ.
ಇನಾಫ್ ಅಂಕರ್ ಜಾಲ್ ನಿವಾಸಿ ಎನ್. ಮನ್ಸೂರ್ ಹುಸೈನ್ ಮತ್ತು ಅಂತ ಫಾತಿಮಾ ಝೊಹರಾ ದಂಪತಿಯ ಪುತ್ರ. ಇನಾಫ್ ಸಾಧನೆಗೆ ಶಾಲಾ ಸಂಚಾಲಕ ಶೇಕ್ ರಹ್ಮತ್ತುಲ್ಲಾ ಹಾಗೂ ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Next Story