ಮಂಗಳೂರು: ನಾಳೆ ಟ್ರು ಚೋಕೊ ಆ್ಯಂಡ್ ನಟ್ಸ್ ಮಳಿಗೆ ಶುಭಾರಂಭ
ಅತ್ಯುತ್ತಮ ನಟ್ಸ್, ಡ್ರೈ ಫ್ರುಟ್ಸ್, ಚಾಕೊಲೇಟ್ಗಳ ವೈವಿಧ್ಯಮಯ ಸಂಗ್ರಹ
ಮಂಗಳೂರು: ವೈವಿಧ್ಯಮಯ ನಟ್ಸ್, ಚಾಕೊಲೇಟ್ಗಳು, ಡ್ರೈ ಫ್ರುಟ್ಸ್ ಇತ್ಯಾದಿಗಳ ಖ್ಯಾತ ಬ್ರ್ಯಾಂಡ್ ‘ಟ್ರು ಚೋಕೊ ಆ್ಯಂಡ್ ನಟ್ಸ್’ ಮಂಗಳೂರಿನಲ್ಲಿ ತನ್ನ ಪ್ರಥಮ ಮಳಿಗೆಯನ್ನು ಸೆ.11ರಂದು ಪ್ರಾರಂಭಿಸಲಿದೆ.
ನಗರದ ಬಲ್ಮಠದಲ್ಲಿ ಎಸ್ಸಿಎಸ್ ಆಸ್ಪತ್ರೆ ಸಮೀಪದ ಅಲದಿನ್ ಶವರ್ಮ ಪಕ್ಕದಲ್ಲಿರುವ ಸರಸ್ವತಿ ಕಾಂಪ್ಲೆಕ್ಸ್ ನಲ್ಲಿ ಟ್ರು ಚೋಕೊ ಆ್ಯಂಡ್ ನಟ್ಸ್ ರವಿವಾರ ಶುಭಾರಂಭ ಗೊಳ್ಳಲಿದೆ.
ಉದ್ಯಮಿಗಳಾದ ವಸೀಮ್ ಅಬ್ದುಲ್ಲಾ ಶೇಖ್ ಹಾಗೂ ತಂಝಿಯ ಖಾನ್ ಜೊತೆಯಾಗಿ ಈ ಬ್ರ್ಯಾಂಡ್ ಅನ್ನು ಮಂಗಳೂರಿಗೆ ತರುತ್ತಿದ್ದಾರೆ. ಮುಂದೆ ಕರಾವಳಿ ಕರ್ನಾಟಕದ ವಿವಿಧೆಡೆ ಈ ಬ್ರ್ಯಾಂಡ್ನ ಮಳಿಗೆಗಳನ್ನು ವಿಸ್ತರಿಸುವ ಯೋಜನೆಯಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ಉತ್ಪನ್ನ ಗಳನ್ನು ಗ್ರಾಹಕರ ಬಯಕೆಯಂತೆ ಒದಗಿಸುವುದು ಹಾಗೂ ಮಂಗಳೂರಿಗರ ವಿಶೇಷ ಸಂದರ್ಭಗಳಿಗೆ ನಮ್ಮ ವಿಶೇಷ ಉತ್ಪನ್ನಗಳ ಮೂಲಕ ಆಕರ್ಷಕ ಮೆರುಗು ನೀಡಿ ಅದನ್ನು ಸ್ಮರಣೀಯವಾಗಿಸುವುದು ನಮ್ಮ ಗುರಿ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಮಂಗಳೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ ನಗರಗಳಲ್ಲಿ ಒಂದು. ವಾಣಿಜ್ಯ ಚಟುವಟಿಕೆಗಳು, ಸಾಂಸ್ಕೃತಿಕ ವೈವಿಧ್ಯ ಹಾಗೂ ಅತ್ಯಾಧುನಿಕತೆಯ ಸ್ಪರ್ಶವಿರುವ ಈ ನಗರಕ್ಕೆ ಇದೇ ಮೊದಲ ಬಾರಿಗೆ ಇಂತಹ ದೊಂದು ಅಂತರ್ರಾಷ್ಟ್ರೀಯ ಗುಣಮಟ್ಟದ, ಎಕ್ಸ್ ಕ್ಲೂಸಿವ್ ಸ್ಟೋರ್ ಬರುತ್ತಿದೆ. ನಮ್ಮ ಈ ನಗರದ ಜನರ ಅಭಿರುಚಿ ಹಾಗೂ ಅಗತ್ಯಕ್ಕೆ ತಕ್ಕಂತಹ ಉತ್ಕೃಷ್ಟ ಉತ್ಪನ್ನಗಳು ಇಲ್ಲಿ ಲಭ್ಯ.
ವಸೀಮ್ ಅಬ್ದುಲ್ಲಾ ಶೇಖ್
ಉದ್ಯಮಿ, ಲೇಖಕಿ, ಕೋಚ್
...ವಿಶೇಷತೆಗಳು...
► ವೈವಿಧ್ಯಮಯ ಡ್ರೈ ಫ್ರುಟ್ಸ್, ನಟ್ಸ್ (ಬಾದಾಮ್, ಗೋಡಂಬಿ, ಪಿಸ್ತಾ, ವಾಲ್ನಟ್, ಒಣ ದ್ರಾಕ್ಷಿಗಳು)
► ಪ್ಯೂರ್ ಚೋಕೊ ಶಾಟ್ಸ್ (ಚಿಲ್ಲಿ, ಪೈನಾಪಲ್, ಬ್ಲೂ ಬೆರಿ, ಐರಿಷ್ ಕಾಫಿ, ಆಲ್ಕೋಹಾಲ್ ಇಲ್ಲದ ಪಾನೀಯಗಳು)
► ಕ್ಯಾಡ್ ಬರಿ ಶಾಟ್ಸ್ (ಕೋಟೆಡ್ ಚಾಕೊಲೇಟ್ಗಳು - ಬಾದಾಮ್, ಹೇಝಲ್ ನಟ್, ಪಿಸ್ತಾ, ಕ್ರಾನ್ಬೆರಿ, ಬಟ್ಟರ್ಸ್ಕಾಚ್ ಇತ್ಯಾದಿ)
► ಖರ್ಜೂರಗಳು ( ಅಜ್ವ್ವಾ, ಕಲ್ಮಿ, ಮಬ್ರೂಮ್, ಮಜ್ಧೂಲ್, ಜೊತೆಗೆ ಬಯಸಿದ ನಟ್ಸ್, ಫ್ರುಟ್ಸ್ ಹಾಗೂ ಚಾಕೊಲೇಟ್ಗಳ ಫಿಲ್ಲಿಂಗ್ಗಳು)
► ವಿದೇಶಿ ಚಾಕೊಲೇಟ್ಗಳು
► ಡಾಯ್ಮ್ ಮಾರ್ಬಲ್ ಚಾಕೊಲೇಟ್ಗಳ ಸಂಗ್ರಹ (ಕ್ಯಾರಾಮೆಲ್ ಡಿಲೈಟ್, ಹೇಝಲ್ ನಟ್, ಫ್ಯಾಂಟಸಿ, ಆಲ್ಮಂಡ್ ಪ್ರಾಲೈನ್, ಆರೆಂಜ್ ಮರ್ಝಿ ಪಾನ್)
► ಗ್ರಾನೊಲ (ಸಿನಮನ್, ಪಾನಿಪುರಿ ಇತ್ಯಾದಿ)
ಬೆಣ್ಣೆ (ಬಾದಾಮ್ ಬಟರ್ ವಿದ್ ಡಾರ್ಕ್ ಚಾಕೊಲೇಟ್, ಕ್ಯಾಶೂ ಬಟರ್ ವಿಥ್ ಡಾರ್ಕ್ ಚಾಕೊಲೇಟ್, ಪೀನಟ್ ಬಟರ್ ವಿದ್ ಚಾಕೊಲೇಟ್, ಆಲ್ಮಂಡ್ ಬಟರ್ ವಿದ್ ಹನಿ)
► ವಿದೇಶಿ ಜ್ಯೂಸ್ಗಳು
► ವೈವಿಧ್ಯಮಯ ಜೇನುತುಪ್ಪಗಳು
► ಮದುವೆ, ಅನಿವರ್ಸರಿ, ಬರ್ತ್ ಡೇ ಇತ್ಯಾದಿ ವಿಶೇಷ ಕಾರ್ಯಕ್ರಮಗಳಿಗೆ ಆರ್ಡರ್ ಪ್ರಕಾರ ಗಿಫ್ಟ್ ಹ್ಯಾಂಪರ್ಗಳು, ಗಿಫ್ಟ್ ಬಾಕ್ಸ್ಗಳು