ಬೆಳ್ತಂಗಡಿ: ಲಾರಿ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಪ್ರವೀಣ್ ಆಚಾರ್ಯ
ಬೆಳ್ತಂಗಡಿ: ಅಳದಂಗಡಿ ಪಿಲ್ಯ ಮಸೀದಿ ಎದುರು ಬೈಕ್ ಮತ್ತು ಈಚರ್ ಲಾರಿ ಢಿಕ್ಕಿಯಾದ ಘಟನೆ ಸೆ.15ರಂದು ರಾತ್ರಿ ನಡೆದಿದೆ.
ಅಪಘಾತದ ಪರಿಣಾಮ ಬೈಕ್ ಸವಾರ ಕುದ್ಯಾಡಿಯ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈಚರ್ ಚಾಲಕ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.
Next Story