ʼಬ್ಯಾರಿ ಭಾಷೆರೊ ಕೊಂಡಾಡ್ರೊನಾಲ್ʼ ಪೋಸ್ಟರ್ ಅಭಿಯಾನ
ಮಂಗಳೂರು: ಬ್ಯಾರಿ ಕಲಾ ರಂಗ ಮಂಗಳೂರು ಇದರ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಬ್ಯಾರಿ ಭಾಷೆರೊ ಕೊಂಡಾಡ್ರೊನಾಲ್ ಪೋಸ್ಟರ್ ಅಭಿಯಾನ ಕಾರ್ಯಕ್ರಮವು ನ್ಯಾಷನಲ್ ಟುಟೋರಿಯಲ್ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ನ ಕೋಶಾಧಿಕಾರಿ ಮನ್ಸೂರ್ ಆಝಾದ್ ಪೋಸ್ಟರ್ ಬಿಡುಗಡೆ ಗೊಳಿಸಿದರು. ಬ್ಯಾರಿ ಕಲಾ ರಂಗದ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಜೆ.ಡಿ.ಎಸ್. ಕಾರ್ಯದರ್ಶಿ ಹೈದರ್ ಪರ್ತಿಪಾಡಿ, ಚಲನ ಚಿತ್ರ ಸಂಗೀತ ನಿರ್ದೇಶಕ ಎ.ಕೆ. ವಿಜಯ್ (ಕೋಕಿಲ), ಸಾರಂಗ್ ರೇಡಿಯೋ ವರದಿಗಾರ ಎಡ್ವರ್ಡ್ ಲೋಬೋ ಭಾಗವಹಿಸಿದ್ದರು.
ಚಲನ ಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಮಜೀದ್ ಸೂರಲ್ಪಾಡಿ, ಸಿ.ಎಂ.ಮುಸ್ತಫ, ಹನೀಫ್, ಅಬ್ದುಲ್ ಜಲೀಲ್, ಹುಸೈನ್ ಕೂಲೂರು, ಸಮದ್ ಕಾಟಿಪಳ್ಳ ಮುಂತಾದವರು ಉಪಸ್ಥಿತರಿದ್ದರು.
ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಯು.ಎಚ್.ಖಾಲಿದ್ ಉಜಿರೆ ನಿರೂಪಿಸಿದರು.