ನ. 18ರಿಂದ ಮೂಳೂರು ಮರ್ಕಝ್ನಲ್ಲಿ ಎಕ್ಸ್ಪ್ಲೋರಿಕ ಆರ್ಟ್ ಫೆಸ್ಟ್-2022
ಕಾಪು: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಅಧೀನ ಸಂಸ್ಥೆಯಾದ ಅಲ್ - ಇಹ್ಸಾನ್ ದಅವಾ ಕಾಲೇಜು ವಿದ್ಯಾರ್ಥಿಗಳ ಎಕ್ಸ್ಪ್ಲೋರಿಕ ಆರ್ಟ್ ಫೆಸ್ಟ್-2022 ನ.18,19,20ರಂದು ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮವು ಒಟ್ಟು 135 ಸ್ಪರ್ಧಾ ಕಾರ್ಯಕ್ರಮಗಳು, 75 ಸ್ಪರ್ಧಾರ್ಥಿಗಳನ್ನು ಹಾಗೂ 2 ತಂಡಗಳನ್ನು ಒಳಗೊಂಡಿದೆ.
ನ.18ರಂದು ಅಸರ್ ನಮಾಝ್ ನಂತರ ನಡೆಯುವ ಉಧ್ಘಾಟನಾ ಸಮಾರಂಭದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು ನ.20ರಂದು ಅಸರ್ ನಮಾಝ್ ನಂತರ ಸಂಸ್ಥೆಯ ಅಧ್ಯಕ್ಷರಾದ ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ರವರ ಅಧ್ಯಕ್ಷತೆಯಲ್ಲಿ ಜಲಾಲಿಯಾ ಮಜ್ಲಿಸ್ ಮತ್ತು ಸಮಾರೋಪ ಸಮಾರಂಭದೊಂದಿಗೆ ಕಾರ್ಯಕ್ರಮಕೆ ತೆರೆ ಬೀಳಲಿದೆ.
ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮರಾ ನೇತಾರರೂ ಡಿಕೆಎಸ್ಸಿ ಹಾಗೂ ಮರ್ಕಝ್ ನಾಯಕರೂ ಭಾಗವಹಿಸಲಿದ್ದಾರೆ ಎಂದು ದಅವಾ ಕಾಲೇಜಿನ ಪ್ರಾಂಶುಪಾಲರಾದ ಸ್ವಾಬಿರ್ ಸಅದಿ ಉಸ್ತಾದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story