ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್: ಮಂಗಳೂರಿನ ಶೀತಲ್ ಟೆಲ್ಲಿಸ್ಗೆ 2 ಚಿನ್ನದ ಪದಕ
ಮಂಗಳೂರು, ನ.28: ಉಡುಪಿ ಜಿಲ್ಲೆಯ ಅಮೃತ್ ಗಾರ್ಡನಿನಲ್ಲಿ ನಡೆದ ರಾಷ್ಟ್ರಮಟ್ಟ್ಟದ 40ನೇ ಬಿಕೆಐ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ 2022ರಲ್ಲಿ ಮಂಗಳೂರಿನ ಶೀತಲ್ ಟೆಲ್ಲಿಸ್ 2 ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
ಶೀತಲ್ ಟೆಲ್ಲಿಸ್ ಮಂಗಳೂರಿನ ನಝರೆತ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ. 13-14 ವಯಸ್ಸಿನ, ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ ವೈಯಕ್ತಿಕ ಕಟಾ ಮತ್ತು ವೈಯಕ್ತಿಕ ಕುಮಿಟಿಯ, ಬ್ಲೂ ಮತ್ತು ಪರ್ಪಲ್ ಬೆಲ್ಟ್, 50-55ಕೆ.ಜಿ ಸ್ಪರ್ಧೆಯ ಎರಡರಲ್ಲೂ ಶೀತಲ್ ಟೆಲ್ಲಿಸ್ ಚಿನ್ನದ ಪದಕ ಗಳಿಸಿದ್ದಾರೆ.
ಇವರು ಮಂಗಳೂರಿನ ಭಾರತೀಯ ವಿದ್ಯಾಭವನದ ಕರಾಟೆ ಸ್ಕೂಲಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
Next Story