ಶಾಸಕರ ಅನುದಾನ ವಿನಿಯೋಗದ ಬಗ್ಗೆ ಪಾಲಿಕೆ ಶ್ವೇತ ಪತ್ರ ಹೊರಡಿಸಲಿ: ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಆಗ್ರಹ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ ಶಾಸಕರ ಅನುದಾನ ಎಷ್ಟು ವಿನಿಯೋಗವಾಗಿದೆ ಎಂಬವುದರ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಕೆಪಿಸಿಸಿ ಯ ಉಪಾಧ್ಯಕ್ಷ ಐವನ್ ಡಿಸೋಜ ಅವರು ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯನ್ನು ಆಗ್ರಹಿಸಿದ್ದಾರೆ.
ಕೇಂದ್ರ, ರಾಜ್ಯ ಹಾಗೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರ ದಲ್ಲಿದ್ದರೂ ಚರಂಡಿ, ರಸ್ತೆ ನಿರ್ಮಾಣಕ್ಕೆ ಕೆಯುಐಡಿಎಫ್ ಸಿ ವತಿಯಿಂದ 27 ಕೋಟಿ ಸಾಲ ಪಡೆಯಲು ತೀರ್ಮಾನಿಸಿರುವುದು ಆಡಳಿತ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಐವನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನಾಪ ಸಾಮಾನ್ಯ ನಿಧಿಯ ಮೂಲಕ ವಾರ್ಡ್ ಗಳ ಅಭಿವೃದ್ಧಿಯ ಬಗ್ಗೆ ಸದಸ್ಯರು ಸೇರಿ ಕ್ರೀಯಾಯೋಜನೆ ರೂಪಿಸುವ ಬದಲು ಶಾಸಕರು ಪಟ್ಟಿ ಮಾಡಿರುವ ಕಾಮಗಾರಿ ಗಳಿಗೆ ಮನಪಾ ಸದಸ್ಯರ ಸಭೆಯಲ್ಲಿ ಮಂಡಿಸಿ ಸಾಲದ ಪ್ರಸ್ತಾವನೆ ಸಲ್ಲಿಸಿರುವುದು ಶಾಸಕರ ವೈಫಲ್ಯ ಮತ್ತು ಮನಪಾ ಸದಸ್ಯ ರ ಹಕ್ಕು ಗಳನ್ನು ಕಸಿದುಕೊಂಡಂತಾಗಿದೆ ಎಂದು ಐವನ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿ ಯ ಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ನವೀನ್ ಡಿಸೋಜ, ಭಾಸ್ಕರ್ ರಾವ್, ಸುಬೋಧಯ ಆಳ್ವ, ಎನ್ ಎಸ್ ಯುಐ ನ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಹಬೀಬುಲ್ಲ ಕಣ್ಣೂರು, ಸಲೀಂ ಮಕ್ಕ,ಮೀಣಾ ಟೆಲಿಸ್, ನಝೀರ್ ಬಜಾಲ್ ಹಾಗೂ ಇತರರು ಉಪಸ್ಥಿತರಿದ್ದರು.











