ಜ.15: ಹಾಜಿ ಕಾರ್ಕಳ ಶೇಖ್ ಶಾಬು ಶಾಹಿಬ್ ಮೆಮೋರಿಯಲ್ ಟ್ರಸ್ಟ್ ನಿಂದ ಸಾಮೂಹಿಕ ವಿವಾಹ

ಮಂಗಳೂರು, ಜ.14: ಹಾಜಿ ಕಾರ್ಕಳ ಶೈಖ್ ಶಾಬು ಶಾಹಿಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ನಗರದ ಬೋಳಾರದ ಶಾದಿಮಹಲ್‌ನಲ್ಲಿ ಜ.15ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ.
ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮತ್ತು ಕುದ್ರೋಳಿ ಜಾಮಿಯಾ ಮಸ್ಜಿದ್‌ನ ಖತೀಬ್ ಅಲ್ಹಾಜ್ ಮುಫ್ತಿ ಮನ್ನಾನ್ ಸಾಹೇಬ್ ನಿಕಾಹ್‌ಗೆ ನೇತೃತ್ವ ನೀಡಿ ದುಆಗೈಯಲಿದ್ದಾರೆ. ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಯೆನೆಪೊಯ ವಿವಿ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ಮತ್ತು ದುಬೈಯ ನಾಶ್ ಗ್ರೂಪ್ ಆಫ್ ಕಂಪೆನೀಸ್‌ನ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ನಿಸಾರ್ ಅಹ್ಮದ್ ಕಾರ್ಕಳ ಭಾಗವಹಿಸಲಿದ್ದಾರೆ. ಟ್ರಸ್ಟ್ ಕಾರ್ಯದರ್ಶಿ ಡಾ.ಮುಹಮ್ಮದ್ ಆರಿಫ್ ಮಸೂದ್ ಸ್ವಾಗತ ಭಾಷಣ ಮಾಡಲಿದ್ದಾರೆ. ಅಲ್ಹಾಜ್ ಕೆ.ಎಸ್.ಇಮ್ತಿಯಾಝ್ ಅಹ್ಮದ್ ಕಾರ್ಕಳ ಅವರು ಹಾಜಿ ಕಾರ್ಕಳ ಶೇಖ್ ಶಾಬು-ಶಾಹಿಬ್ ಮೆಮೋರಿಯಲ್ ಟ್ರಸ್ಟ್ ಕುರಿತು ಪರಿಚಯ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







