ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉಡುಪಿಯ ರಾಹುಲ್ ಶೆಟ್ಟಿಗಾರ್ ಪ್ರಥಮ ರ‍್ಯಾಂಕ್

ಮಂಗಳೂರು: ರಾಜ್ಯಮಟ್ಟದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಪರ್ಕಳದ ರಾಹುಲ್ ಶೆಟ್ಟಿಗಾರ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತರಾಗಿರುವ ಸವೋದಯ ಶೆಟ್ಟಿಗಾರ್ ಮತ್ತು ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿ ಲೀಲಾವತಿ ದಂಪತಿಯ ಪುತ್ರನಾಗಿರುವ ರಾಹುಲ್ ಶೆಟ್ಟಿಗಾರ್ ಬೆಂಗಳೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಶಿಕ್ಷಣ ಪಡೆದರು. ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ನ್ಯಾಯವಾದಿ ಪಿ.ಪಿ.ಹೆಗ್ಡೆ ಅವರ ಬಳಿ ಕಿರಿಯ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
‘ನನ್ನ ತಂದೆ ನ್ಯಾಯಾಧೀಶರಾಗಿದ್ದರು. ಅವರ ಪ್ರೋತ್ಸಾಹದಿಂದ ಕಾನೂನು ಕಲಿತಿದ್ದೇನೆ. ಅವರ ಪ್ರೇರಣೆಯಿಂದ ರ್ಯಾಂಕ್ ಬಂದಿದೆ’ ಎಂದು ರಾಹುಲ್ ಶೆಟ್ಟಿಗಾರ್ ಸಂತಸ ಹಂಚಿಕೊಂಡಿದ್ದಾರೆ.
Next Story





