ದ.ಕ ಜಿಲ್ಲಾ ಮಟ್ಟದ "ಅಲ್ ಬಿರ್ರ್ ಕಿಡ್ಸ್ ಫೆಸ್ಟ್"
ಪ್ರೈಮರಿ ವಿಭಾಗದಲ್ಲಿ ಕೈಕಂಬ, ಪ್ರಿ ಪ್ರೈಮರಿ ವಿಭಾಗದಲ್ಲಿ ಆದರ್ಶ್ ಅಲ್ ಬಿರ್ರ್ ತೋಡಾರ್ ಚಾಂಪಿಯನ್
ಪ್ರೈಮರಿ ವಿಭಾಗದಲ್ಲಿ ಕೈಕಂಬ, ಪ್ರಿ ಪ್ರೈಮರಿ ವಿಭಾಗದಲ್ಲಿ ಆದರ್ಶ್ ಅಲ್ ಬಿರ್ರ್ ತೋಡಾರ್ ಚಾಂಪಿಯನ್
ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಲ್ ಬಿರ್ರ್ ಕೀಡ್ಸ್ ಫೆಸ್ಟ್ ಕರಾಯ ಅಲ್ ಬಿರ್ರ್ ಶಾಲೆಯಲ್ಲಿ ನಡೆಯಿತು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಉಸ್ತಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಫೀಕ್ ಮಾಸ್ಟರ್, ಅಲ್ ಬಿರ್ರ್ ಟ್ರೆನರ್ ಫೈಝಲ್ ಹುದವಿ, ಶಾಫಿಕ್ ಹುದವಿ, ಜಾಬಿರ್ ಹುದವಿ, ಆಸಿಫ್ ಹಾಜಿ ಆದರ್ಶ್, ಹೈದರ್ ದಾರಿಮಿ, ಎಸ್.ಬಿ ದಾರಿಮಿ, ಶುಕುರ್ ದಾರಿಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸುಮಾರು 600ರಷ್ಟು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪ್ರೈಮರಿ ವಿಭಾಗದಲ್ಲಿ ಸಾಬೀಲ್ ಉಲ್ ಹುದಾ ಅಲ್ ಬಿರ್ರ್ ಕೈಕಂಬ ಚಾಂಪಿಯನ್ ಪಡೆದುಕೊಂಡರೆ, ಪ್ರಿ ಪ್ರೈಮರಿ ವಿಭಾಗದಲ್ಲಿ ಆದರ್ಶ್ ಅಲ್ ಬಿರ್ರ್ ತೋಡಾರ್ ಚಾಂಪಿಯನ್ ತನ್ನದಾಗಿಸಿಕೊಂಡಿತು.