ಮಂಗಳೂರು ವಿಮಾನ ನಿಲ್ದಾಣದಲ್ಲಿ 18 ದಿನದಲ್ಲಿ 2 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನ ವಶ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mangaluru International Airport) ಜ.1ರಿಂದ 18ರವರೆಗೆ ವಿವಿಧ ಪ್ರಕರಣಗಳಲ್ಲಿ 2,01,69,800 ರೂ. ಮೌಲ್ಯದ 3,677 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ದುಬೈ ಮತ್ತು ಅಬುಧಾಬಿಯಿಂದ ಆಗಮಿಸಿದ 8 ಮಂದಿ ಪ್ರಯಾಣಿಕರು ವಿವಿಧ ರೀತಿಯಲ್ಲಿ ಚಿನ್ನವನ್ನು ಕಳ್ಳ ಸಾಗಣಿಕೆ ಮಾಡಲು ಪ್ರಯತ್ನಿಸಿದ್ದಾರೆ.
ಇದರೊಂದಿಗೆ ದುಬೈನಿಂದ ಬಂದಿಳಿದಿದ್ದ ಒಬ್ಬ ಪ್ರಯಾಣಿಕನಿಂದ 3,20,265 ರೂ. ಮೌಲ್ಯದ ಇ-ಸಿಗರೇಟ್‌ಗಳಲ್ಲಿ ಬಳಸುವ ಇ- ನಿಕೋಟಿನ್ ಲಿಕ್ವಿಡ್ ಮತ್ತು ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆತ ಬ್ಯಾಗ್‌ನಲ್ಲಿ ಮರೆಮಾಚಿ ಸಾಗಾಣಿಕೆಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು.
ಪ್ರಕರಣಗಳ ಕುರಿತಂತೆ ವಿಚಾರಣೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇದು ಕ್ರೀಡಾಪಟುಗಳ ಪ್ರತಿಭಟನೆ, ವೇದಿಕೆಯಿಂದ ಕೆಳಗಿಳಿಯಿರಿ: ಬೃಂದಾ ಕಾರಟ್‌ಗೆ ಧರಣಿ ನಿರತ ಕುಸ್ತಿಪಟುಗಳ ಮನವಿ
Next Story







