ಮದ್ದಡ್ಕ ಅಕ್ರಮ ಗೋ ಮಾಂಸ ಅಡ್ಡೆಗೆ ದಾಳಿ: 3 ಮಂದಿಯ ವಶಕ್ಕೆ
ಬೆಳ್ತಂಗಡಿ: ತಾಲೂಕಿನ ಮದ್ದಡ್ಕ ಬಳಿ ಅಕ್ರಮ ಗೋ ಮಾಂಸ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ ಘಟನೆ ಜ.20ರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ಕುವೆಟ್ಟು ಗ್ರಾಮದ ಮದ್ದಡ್ಕದ ಹಮೀದ್, ಇಸ್ಮಾಯಿಲ್ ಮತ್ತು ಹಾರಿಸ್ ಎಂಬವರನ್ನು ಪೊಲೀಸರು ವಶಕ್ಕೆಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕದ ಅನಿಲ ಎಂಬಲ್ಲಿಯ ಮನೆಯೊಂದರಲ್ಲಿ ಗೋ ವಧೆಯ ಬಗ್ಗೆ ಸ್ಥಳೀಯರಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಾತ್ರಿ ವೇಳೆ ದಾಳಿ ನಡೆಸಿದ್ದಾರೆ.
ಸುಮಾರು 55 ಕೆ.ಜಿ.ಯಷ್ಟು ಗೋ ಮಾಂಸ ಹಾಗೂ ಇತರ ಸೊತ್ತುಗಳು ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story