Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಜನರ ಮಧ್ಯೆ ದ್ವೇಷ, ಜಗಳ...

ಜನರ ಮಧ್ಯೆ ದ್ವೇಷ, ಜಗಳ ಹೆಚ್ಚಿಸಿರುವುದಷ್ಟೇ ಬಿಜೆಪಿ ಸಾಧನೆ: ಬಿ.ಕೆ.ಹರಿಪ್ರಸಾದ್

22 Jan 2023 11:26 PM IST
share
ಜನರ ಮಧ್ಯೆ ದ್ವೇಷ, ಜಗಳ ಹೆಚ್ಚಿಸಿರುವುದಷ್ಟೇ ಬಿಜೆಪಿ ಸಾಧನೆ: ಬಿ.ಕೆ.ಹರಿಪ್ರಸಾದ್

ಉಡುಪಿ, ಜ.22: ‘ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸಿದ್ದೀರಿ, ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸಿ ಕಳಿಸಿದ್ದೀರಿ. ಈ ಜನಪ್ರತಿನಿಧಿಗಳು ತಮ್ಮ ಕೊಡುಗೆ ಏನೆಂಬುದನ್ನ ತೋರಿಸಲಿ. ಶಾಂತಿ ಸುವ್ಯವಸ್ಥೆಯಲ್ಲಿದ್ದ ಜನರ ಮಧ್ಯ ದ್ವೇಷ, ಜಗಳ ಹೆಚ್ಚಿಸಿರುವುದಷ್ಟೇ ಇವರ ಸಾಧನೆ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಸರಕಾರ ಐದು ವರ್ಷಗಳಲ್ಲಿ ಏನು ಸಾಧನೆ ಮಾಡಿದೆ, ಯಾವ ಯೋಜನೆ ತಂದಿದ್ದೀವಿ ಎನ್ನುವ ಮೂಲಕ ಮತದಾರರ ಬಳಿ ಹೋಗ್ತೀವಿ. ಆದರೆ ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಸರಕಾರ ಮಹಿಳೆಯವರಿಗೆ ಏನು ಮಾಡಿದೆ? ಯುವಕರಿಗೆ ಏನು ಮಾಡಿದೆ ಶಿಕ್ಷಣಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ತಿಳಿಸಲಿ ಎಂದು ಸವಾಲೆಸೆದರು.

ರಾಜ್ಯದಲ್ಲಿ ಬಿಜೆಪಿಯವರು ಎರಡು ಸಲ ಅಧಿಕಾರ ಮಾಡಿದ್ದಾರೆ. ಎರಡೂ ಸಲವೂ ಅವರಿಗೆ ಬಹುಮತ ಬರಲಿಲ್ಲ. ಪ್ರಜಾಪ್ರಭುತ್ವವನ್ನ ಬುಡಮೇಲು ಮಾಡಿ, ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಈ ಬಿಜೆಪಿಯವರು ಜನರಿಗೋಸ್ಕರ ಯಾವ ಸಾಧನೆ ಮಾಡಿದ್ದಾರೆ? ಜನರ ಎದುರು ಹೋಗಲು ಇವರಿಗೆ ಮುಖ ಇಲ್ಲ ಟೀಕಿಸಿದರು.

ಪ್ರಜಾಧ್ವನಿ ಯಾತ್ರೆಯ ಮೂಲಕ ಜನರ ಎದುರು ಬಿಜೆಪಿ ಸರಕಾರದ ದುರಾಡಳಿತವನ್ನ ಹೇಳುವ ಜವಾಬ್ದಾರಿ ನಮ್ಮ ಮೇಲಿದೆ. ಈ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಿದ್ದು, ಮೂರುವರೆ ವರ್ಷದಲ್ಲಿ ಇವರು ಏನು ಮಾಡದೇ ಇರುವುದಕ್ಕೆ ಈ ಜನಸ್ತೋಮವೇ ಸಾಕ್ಷಿ ಎಂದು ಹರಿಪ್ರಸಾದ್ ನುಡಿದರು.

ರಾಜ್ಯದಲ್ಲೇ ಅತೀ ಹೆಚ್ಚಿನ ಸಾಕ್ಷರತೆ ಹೊಂದಿರುವ ಕರಾವಳಿಯ ಉಡುಪಿ ಮತ್ತು ದ.ಕ. ಜಿಲ್ಲೆಗೆ ಬಿಜೆಪಿ ಕಳಂಕ ತಂದಿದೆ. ನಾವು ಬೆಂಗಳೂರಿನಲ್ಲಿದ್ದಾಗ ಶೈಕ್ಷಣಿಕ ಫಲಿತಾಂಶದಲ್ಲಿ ಉಡುಪಿ ಪ್ರಥಮ, ದ.ಕ. ಜಿಲ್ಲೆ ಪ್ರಥಮ ಸ್ಥಾನ ಎಂದು ಪತ್ರಕೆಗಳಲ್ಲಿ ಓದುತ್ತಾ ಇದ್ದೆವು, ನಮ್ಮ ಭುಜ ತಟ್ಟಿಕೊಳ್ಳುತ್ತಾ ಇದ್ದೆವು. ಆದರೆ ಮೊಟ್ಟಮೊದಲ ಬಾರಿಗೆ ಉಡುಪಿ ಜಿಲ್ಲೆ 15, 18ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರ ಮೊದಲ ಸ್ಥಾನಕ್ಕೇರಿದೆ. ಕರಾವಳಿ ಜಿಲ್ಲೆಗಾದ ಈ ಅವಮಾನಕ್ಕೆ ಇಲ್ಲಿನ ಶಾಸಕರು, ಸಚಿವರೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರಸ್ ನಾಯಕಿ ಸೋನಿಯಾ ಗಾಂಧಿ ಮಾರ್ಗದರ್ಶನದಿಂದ, ಆಗಿನ ಪ್ರಧಾನಿ ಮನಮೋಹನ್ ಸಿಂಗ್‌ರ ಪರಿಶ್ರಮದಿಂದ ಅಕ್ಷರ ದಾಸೋಹದ ಮೂಲಕ ಬಡವರ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ. ಎಲ್ಲಾ ಮಕ್ಕಳಿಗೆ ಉಚಿತವಾಗಿ ಮತ್ತು ಕಡ್ಡಾಯವಾಗಿ ಶಿಕ್ಷಣ ನೀಡಲು ಆರ್‌ಟಿಇ ಮೂಲಕ ಶಿಕ್ಷಣ ನೀಡುವ ಕಾನೂನು ತಂದಿದ್ದೇವೆ. ಆದರೆ ಬಿಜೆಪಿ ಸರಕಾರದ ಸಾಧನೆ ಏನಿದೆ ಎಂದು ಅವರು ಪ್ರಶ್ನಿಸಿದರು.

 ಈ ಜಿಲ್ಲೆಗೆ ವೀರಪ್ಪ ಮೊಯ್ಲಿ ಆಗಲಿ, ಸಿದ್ದರಾಮಯ್ಯ ಆಗಲಿ ಯಾರೇ ಇರಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಟ್ಟು ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ. ಕ್ರೈಸ್ತ ಮಿಷನರಿಗಳ ಮೂಲಕ, ಮಣಿಪಾಲ್ ಸಂಸ್ಥೆ ಮೂಲಕ ಅಭೂತ ಪೂರ್ವ ಕೊಡುಗೆ ಶಿಕ್ಷಣಕ್ಕೆ ನೀಡಿದ ಜಿಲ್ಲೆಗಳಿವು. ಕರಾವಳಿಗೆ ಬಿಜೆಪಿಯ ಕೊಡುಗೆ ಏನು ಎಂಬುದನ್ನ ಹೇಳಲಿ.

ಕರಾವಳಿಯವರಾದ ಬಿಜೆಪಿ ರಾಜ್ಯಾಧ್ಯಕ್ಷ ವಿದೂಷಕನಂತೆ ಹೇಳಿಕೆಗಳನ್ನ ನೀಡುತ್ತಾರೆ. ಅಭಿವೃದ್ಧಿ ಬೇಡ, ರಸ್ತೆ ಬೇಡ, ಚರಂಡಿ ಬೇಡ, ಆರೋಗ್ಯ ಬೇಡ, ಶಿಕ್ಷಣ ಕೇಳ್ಬೇಡಿ ಅದರ ಬದಲಾಗಿ ಹಿಜಾಬ್ ಬಗ್ಗೆ ಮಾತಾಡಿ, ಹಲಾಲ್ ಬಗ್ಗೆ ಮಾತಾಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ಕರೆ ಕೊಡುತ್ತಾರೆ. ಬಿಜೆಪಿಯವರು ಕರಾವಳಿ ಜಿಲ್ಲೆಯನ್ನು ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು. ನಳಿನ್ ಕುಮಾರ್ ಅವರೇ, ಬಡವರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡಬೇಡಿ. ಹಿಂದುಳಿದ ಮಕ್ಕಳಿಗೆ ಬಾವಿಗೆ ತಳ್ಳಬೇಡಿ ಎಂದರು.

ಕರಾವಳಿ ಜಿಲ್ಲೆಯವರು ಸೌಹಾರ್ದದಿಂದ ಇದ್ದಾರೆ. ಬಿಜೆಪಿಯರು ದ್ವೇಷ ಹುಟ್ಟಿಸುತ್ತಿದ್ದಾರೆ. ಬಿಜೆಪಿಯವರ ಅಧಿಕಾರದ ಬೇಳೆ ಬೇಯಲು ಹಿಂದುಳಿದವರ ಮಕ್ಕಳನ್ನ ಯಾಕೆ ಬಲಿ ಕೊಟ್ಟಿದ್ದೀರಿ.? ಕರಾವಳಿ ಜಿಲ್ಲೆಯರ ಅಭಿವೃದ್ಧಿ ಇವರಿಗೆ ಬೇಕಿಲ್ಲ, ಬದಲಿಗೆ ಅಭಿವೃದ್ಧಿಯನ್ನೇ ನಾಶ ಮಾಡುತ್ತಿದ್ದಾರೆ. ಕರಾವಳಿಯನ್ನ ಕೋಮುವಾದದ ಪ್ರಯೋಗ ಶಾಲೆ ಮಾಡುವ ಮೂಲಕ ಶಾಂತಿ, ನೆಮ್ಮದಿಯನ್ನ ನಾಶ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದರು.

ಬಿಜೆಪಿಯವರ ಸಂಸ್ಕೃತಿಯೇ ಕೊಲೆಗಳ ರಾಜಕೀಯ. ಪ್ರವೀಣ್ ಪೂಜಾರಿ ಕೊಲೆಯಾಯ್ತು. ಕೊಲೆ ಮಾಡಿದವರು ಬಿಜೆಪಿಯವರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮನೆ ಹತ್ತಿರವೇ ಕೊಲೆಯಾಗಿದೆ. ಪ್ರಕರಣದ ಮೊದಲ ಆರೋಪಿ ಬಿಜೆಪಿಯ ಮಂಡಲ ಅಧ್ಯಕ್ಷ. ಇವರ ಇತಿಹಾಸವೇ ಕೊಲೆಗಳಿಂದ ಪ್ರಾರಂಭವಾಗುತ್ತದೆ ಎಂದರು.

ಬಸವರಾಜ ಬೊಮ್ಮಾಯಿಯವರ ಕೈಯಲ್ಲಿ ಸರಕಾರವೇ ಇಲ್ಲ. ಆರೆಸ್ಸೆಸ್‌ನ ಕೇಶವ ಕೃಪದ ಆದೇಶ ಪಾಲನೆ ಮಾಡುತ್ತಿದ್ದಾರೆ. ಕೇಶವಕೃಪಾದ ಸೂತ್ರಧಾರಿಗಳಂತೆ ಇವರೆಲ್ಲಾ ಪಾತ್ರಧಾರಿಗಳು ಎಂದು ಹರಿಪ್ರಸಾದ್ ಆರೋಪಿಸಿದರು.

ಕರಾವಳಿಯ ಜನ ಸ್ವಂತ ಶಕ್ತಿಯ ಮೇಲೆ ಕೆಲಸ ಮಾಡುವವರು. ಸರಕಾರದ ಬಳಿ ಆರೋಗ್ಯಕ್ಕಾಗಿ ಬೇಡುವವರಲ್ಲ, ಉದ್ಯೋಗ ಕೇಳುವವರಲ್ಲ. ಅವಿಭಜಿತ ದ.ಕ. ಜಿಲ್ಲೆ ಐದು ದೊಡ್ಡ ದೊಡ್ಡ ಬ್ಯಾಂಕ್‌ಗಳನ್ನು ಕೊಟ್ಟಿದೆ. ಬ್ಯಾಂಕ್‌ಗಳನ್ನ ಸ್ಥಾಪಿಸಲು ಸರಕಾರದ ಬಳಿಯಾಗಲಿ,ಯಾರಿಂದಾಗಲಿ ಸಹಾಯ ಕೇಳಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಬಿಲ್ಲವರು, ಮೊಗವೀರರು, ಬ್ಯಾರಿಗಳು, ಕೊರಗರು, ಬಂಟರು ಎಲ್ಲಾ ಸಮುದಾಯಗಳ ಜನರು ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಬೆಂಗಳೂರು ಬಿಟ್ಟರೆ ಅವಿಭಾಜ್ಯ ಜಿಲ್ಲೆಯೇ ಅತೀ ಹೆಚ್ಚು ತೆರಿಗೆ ಪಾವತಿಸುತ್ತಾರೆ. ಆದರೆ ಬಿಜೆಪಿಯ ಅವಧಿಯಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ.

-ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ವಿಪಕ್ಷ ನಾಯಕ

share
Next Story
X