ಗ್ರಾಮಚಾವಡಿ: ಆರೋಗ್ಯ ಕ್ಲಿನಿಕ್ ಉದ್ಘಾಟನೆ
ಮಂಗಳೂರು: ಕೊಣಾಜೆ ಸಮೀಪದ ಗ್ರಾಮಚಾವಡಿ ಟೆಲ್ಲಿಸ್ ಕಾಂಪ್ಲೆಕ್ಸ್ನಲ್ಲಿ ಕೆ.ಎಂ. ಮೆಡಿಕಲ್ ಮಾಲಕ ಅಬ್ದುಲ್ ಅಝೀಝ್ ನೇತೃತ್ವದಲ್ಲಿ ಡಾ.ಮುಹಮ್ಮದ್ ಝಿಯಾದ್ ಮಲಾರ್ರ ‘ಆರೋಗ್ಯ ಕ್ಲಿನಿಕ್’ನ್ನು ಶಾಸಕ ಯು.ಟಿ. ಖಾದರ್ ಉದ್ಘಾಟಿಸಿ ಶುಭ ಹಾರೈಸಿದರು.
ಎಸ್ಡಿಪಿಐ ರಾಷ್ಟೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಪಾವೂರು ಗ್ರಾಪಂ ಉಪಾಧ್ಯಕ್ಷ ಅನ್ಸಾರ್ ಇನೋಳಿ,ಅಂಬ್ಲಮೊಗರು ಗ್ರಾಪಂ ಉಪಾಧ್ಯಕ್ಷ ಇಕ್ಬಾಲ್, ಹರೇಕಳ ಗ್ರಾಪಂ ಉಪಾಧ್ಯಕ್ಷೆ ಕಲ್ಯಾಣಿ, ಇಮ್ತಿಯಾಝ್ ಪಾನೇಲ, ಗ್ರಾಪಂ ಮಾಜಿ ಅಧ್ಯಕ್ಷ ಫಿರೋಝ್ ಮಲಾರ್, ಝಕರಿಯ್ಯಾ ಮಲಾರ್, ಡಾ.ಮುಹಮ್ಮದ್ ಝಿಯಾದ್ರ ತಂದೆ ಅಬೂಬಕರ್ ಎಚ್. ಮಲಾರ್, ತಾಯಿ ಝಬೈದಾ, ಸಹೋದರಿ ಆಯಿಶತ್ ಝಾಹಿದ ಮಲಾರ್, ಹಮೀದ್ ಯು.ಕೆ. ಉಪ್ಪಿನಂಗಡಿ, ಮತ್ತಿತರರು ಉಪಸ್ಥಿತರಿದ್ದರು.
Next Story