ಮಂಗಳೂರು: ಆನ್ಲೈನ್ ವಂಚನೆಯ ವಿರುದ್ಧ ಸೈಬರ್ ಠಾಣೆಗೆ ದೂರು
ಮಂಗಳೂರು, ಮಾ.31: ವಾಟ್ಸ್ಆ್ಯಪ್ ಮೂಲಕ ವ್ಯಕ್ತಿಯೊಬ್ಬ ಪರಿಚಯಿಸಿಕೊಂಡು ಬಳಿಕ ತನ್ನೊಂದಿಗೆ ಸಲುಗೆಯಿಂದ ಮಾತನಾಡಿ ಲಿಂಕ್ ಕಳುಹಿಸುತ್ತಾ 1,11,500 ರೂ.ವನ್ನು ಆತನ ಖಾತೆಗೆ ವರ್ಗಾಯಿಸಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಡೆಂಟಲ್ ಕಲಿಯುತ್ತಿರುವ ವಿದ್ಯಾರ್ಥಿಯನ್ನು ಮಾ.1ರಂದು ಸಂಪರ್ಕಿಸಿದ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಪರಿಚಯಿಸಿಕೊಂಡು ಲಿಂಕ್ವೊಂದನ್ನು ಕಳುಹಿಸಿ ಅದನ್ನು ಕ್ಲಿಕ್ ಮಾಡಲು ಸೂಚಿಸಿದ್ದ. ಆ ಬಳಿಕ ಮಾ.3ರಿಂದ 4ರವರೆಗೆ ತನ್ನ ಎಸ್ಬಿಐ ಖಾತೆಯಿಂದ 1,11,500 ರೂ. ವರ್ಗಾಯಿಸಿಕೊಂಡಿದ್ದಾನೆ. ಈ ಬಗ್ಗೆ ಬ್ಯಾಂಕ್ನಲ್ಲಿ ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆ ವರ್ಗಾವಣೆಯಾಗಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story