ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಿಬಿ ರಿಷ್ಯಂತ್ ನೇಮಕ

ಮಂಗಳೂರು, ಜೂ.20: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಿಬಿ ರಿಷ್ಯಂತ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ವಿಕ್ರಮ್ ಅಮಟೆ ವೈದ್ಯಕೀಯ ರಜೆಯಲ್ಲಿ ತೆರಳಿದ ಹಿನ್ನಲೆಯಲ್ಲಿ ಸಿಬಿ ರಿಷ್ಯಂತ್ ಇತ್ತೀಚೆಗೆ ದ.ಕ. ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು. ಇದೀಗ ಅವರನ್ನು ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
2013ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ರಿಷ್ಯಂತ್ ಮೂಲತಃ ಬೆಂಗಳೂರಿನವರು. 2016ರಲ್ಲಿ ಪುತ್ತೂರು ಎಎಸ್ಪಿಯಾಗಿದ್ದರು. ಮೈಸೂರು, ದಾವಣಗೆರೆ, ಬಾಗಲಕೋಟೆಯಲ್ಲಿ ಎಸ್ಪಿಯಾಗಿದ್ದರು.
ಇದನ್ನೂ ಓದಿ... 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರಕಾರ
Next Story





