ಪ್ರಥಮ ಹಜ್ ಯಾತ್ರಿಗಳ ವೀಸಾ ವೆಚ್ಚ ಮನ್ನಾ
ಜಿದ್ದಾ (ಸೌದಿ ಅರೇಬಿಯ), ಮೇ 15: ಹಜ್ ಮತ್ತು ಉಮ್ರಾ ಯಾತ್ರಿಕರ ಪ್ರಥಮ ಪ್ರವೇಶ ವೀಸಾದ ಖರ್ಚನ್ನು ಎರಡು ಪವಿತ್ರ ಮಸೀದಿಗಳ ಉಸ್ತುವಾರಿ ಹಾಗೂ ಸೌದಿ ದೊರೆ ಸಲ್ಮಾನ್ ಭರಿಸಲಿದ್ದಾರೆ.
ಎರಡು ಪವಿತ್ರ ಮಸೀದಿಗಳ ಆಡಳಿತ ಮಂಡಳಿ ಸಮಿತಿ ಜೊತೆ ನಡೆಸಿದ ಸಭೆಯ ವೇಳೆ ಹಜ್ ಮತ್ತು ಉಮ್ರಾ ಸಚಿವ ಮುಹಮ್ಮದ್ ಬಿನ್ ಸಲೇಹ್ ಬೆನ್ತಿನ್ ಈ ವಿಷಯ ತಿಳಿಸಿದರು.
‘‘ಹಜ್ ಮತ್ತು ಉಮ್ರಾ ಯಾತ್ರಿಕರು ಎದುರಿಸುವ ಎಲ್ಲ ಅಡೆತಡೆಗಳನ್ನು ನಿವಾರಿಸುವುದು ಹಾಗೂ ಮಕ್ಕಾ ಮತ್ತು ಮದೀನಾಗಳಲ್ಲಿರುವ ಎರಡು ಪವಿತ್ರ ಮಸೀದಿಗಳಿಗೆ ಸುಗಮ ಪ್ರಯಾಣವನ್ನು ಏರ್ಪಡಿಸುವುದು ನಮ್ಮ ಆದ್ಯತೆಯಾಗಿದೆ’’ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
Next Story