ಕುವೈತ್: ನೂತನ ಯುವರಾಜನಾಗಿ ಶೇಖ್ ಮಿಶಾಲ್ ನೇಮಕ
ಕುವೈತ್ ಸಿಟಿ, ಅ. 7: ಕುವೈತ್ನ ಹೊಸ ಆಡಳಿತಗಾರ ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಸಬಾಹ್ ಬುಧವಾರ ಶೇಖ್ ಮಿಶಾಲ್ ಅಲ್-ಅಹ್ಮದ್ ಅಲ್-ಜಾಬಿರ್ ಅಲ್-ಸಬಾಹ್ರನ್ನು ದೇಶದ ನೂತನ ಯುವರಾಜನಾಗಿ ನೇಮಿಸಿದ್ದಾರೆ. ಶೇಖ್ ಮಿಶಾಲ್ ಪ್ರಸಕ್ತ ನ್ಯಾಶನಲ್ ಗಾರ್ಡ್ನ ಉಪಮುಖ್ಯಸ್ಥರಾಗಿದ್ದಾರೆ.
ಶೇಖ್ ಮಿಶಾಲ್ರ ನೇಮಕಾತಿಗೆ ಅಲ್-ಸಬಾಹ್ ಕುಟುಂಬದ ಆಶೀರ್ವಾದವಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ಕುಯುಎನ್ಎ ಅಮೀರ್ ಕಚೇರಿಯ ಹೇಳಿಕೆಯೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.
ಈ ನೇಮಕಾತಿಗೆ ಕುವೈತ್ ಸಂಸತ್ನ ಔಪಚಾರಿಕ ಅಂಗೀಕಾರ ಬೇಕಾಗಿದೆ.
Next Story