ಜಿದ್ದ: ಭಾರತೀಯ ಮೃತ ಸ್ಥಿತಿಯಲ್ಲಿ ಪತ್ತೆ
ಜಿದ್ದ,ಸೆಪ್ಟಂಬರ್ 23: ಮಲಪ್ಪುರಂ ಕೋಟ್ಟೂರು ಚೆಮ್ಮಂಕಡವ್ನ ಹಂಝ(56) ಎಂಬವರು ವಾಸಸ್ಥಳದಲ್ಲಿ ಮೃತರಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರಾಗಿ ಎರಡು ದಿನಕ್ಕಿಂತ ಹೆಚ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ. ಅವರ ಕೋಣೆಯಿಂದ ದುರ್ಗಂಧ ಹರಡಿದ ನಂತರ ಪರಿಶೀಲಿಸಿದಾಗ ಹಂಝ ಮೃತರಾಗಿರುವುದು ತಿಳಿದು ಬಂದಿದೆ.
ಅವರು ಜಿದ್ದದ ಶಾರೆ ಫೆಲಸ್ತೀನ್ ಸಬ್ಈನ್ ರಸ್ತೆ ಯಲ್ಲಿರುವ ಪಾತ್ರೆ ಮಾರಾಟ ಅಂಗಡಿಯಲ್ಲಿ ಕೆಲಸಕ್ಕಿದ್ದರು. ಅವರೊಬ್ಬರೇ ಒಂದು ಕೋಣೆಯಲ್ಲಿ ವಾಸವಿದ್ದರು. ಮೃತದೇಹವನ್ನು ಕಿಂಗ್ ಅಬ್ದುಲ್ ಅಝೀರ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ವರದಿ ತಿಳಿಸಿದೆ.
Next Story