ಬಾಲಕಿಗೆ ಹಿಂಸೆ ನೀಡಿ ಕೊಂದ ತಾಯಿ,ಸಹೋದರಿಯ ಬಂಧನ
ಜಿದ್ದ,ಜ.28: ಹದಿನಾಲ್ಕುವರ್ಷದ ಪುತ್ರಿಗೆ ಹಿಂಸೆ ನೀಡಿ ಕೊಂದ ಪ್ರಕರಣದಲ್ಲಿ ಬಾಲಕಿಯ ತಾಯಿ ಮತ್ತು ಸಹೋದರಿಯನ್ನು ಬಂಧಿಸಲಾಗಿದೆ. ಬಾಲಕಿಯ ಸಹೋದರಿಯನ್ನು ತಾಯಿಗೆ ನೆರವಾದ ಆರೋಪದಲ್ಲಿ ಬಂಧಿಸಲಾಗಿದ್ದು, ಕಳೆದ ರವಿವಾರ ತಾಯಿಫ್ನಲ್ಲಿ ಘಟನೆ ನಡೆದಿತ್ತು.
ಯಮನ್ನ ಮಹಿಳೆ ತನ್ನ ಹದಿನಾಲ್ಕುವರ್ಷದ ಮಗಳಿಗೆ ಹಿಂಸೆ ನೀಡಿದ್ದಾಳೆ. ತಲೆ, ಮೈಕೈಎಂದೂ ನೋಡದೆ ಹೊಡೆದದ್ದಲ್ಲದೆ, ಕುದಿಯುವ ನೀರನ್ನು ಮೈಮೇಲೆ ಸುರಿದಿದ್ದಾಳೆ. ನಂತರ ಬಾಲಕಿಯನ್ನು ಅಮೀರ್ ಮನ್ಸೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮರುದಿನ ಬಾಲಕಿ ಆಸ್ಪತ್ರೆಯಲ್ಲಿ ಅಸುನೀಗಿದ್ದಳು. ನಂತರ ಮೃತಳ ತಾಯಿ ಮತ್ತು ಸಹೋದರಿಯನ್ನು ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನೂ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಿದ್ದಾರೆಂದು ವರದಿ ತಿಳಿಸಿದೆ.
Next Story