ಇತಿಯೋಪಿಯನ್ ಮಹಿಳೆಯನ್ನು ಬಹುಮಾನವಾಗಿಟ್ಟ ಬಹರೈನ್ ನೇಮಕಾತಿ ಏಜೆನ್ಸಿ ಪರವಾನಿಗೆ ರದ್ದು
ಮನಾಮ,ಮೇ 5: ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಇತಿಯೋಪಿಯದ ಮನೆಕೆಲಸದ ಮಹಿಳೆಯನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದ್ದ ಇಲ್ಲಿನ ರಿಕ್ರ್ಯೂಟ್ಮೆಂಟ್ ಏಜೆನ್ಸಿಯ ಲೈಸನ್ಸ್ ನ್ನು ಬಹರೈನ್ ಲೇಬರ್ ಮಾರ್ಕೆಟ್ ರೆಗ್ಯುಲಟರಿ ಅಥಾರಿಟಿ ರದ್ದುಪಡಿಸಿದೆ. ಈ ಏಜೆನ್ಸಿ ಸ್ಪರ್ಧೆಯೊಂದನ್ನು ಏರ್ಪಡಿಸಿ ಅದಕ್ಕೆ ಮೊದಲ ಬಹುಮಾನವಾಗಿ ಇತಿಯೋಪಿಯನ್ ಮಹಿಳೆಯನ್ನು ಕೊಡುವುದಾಗಿ ಜಾಹೀರಾತು ನೀಡಿತ್ತು.
ಏಜೆನ್ಸಿಯ ಈ ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಗೊಂಡಾಗ ವ್ಯಾಪಕ ಪ್ರತಿಭಟನೆ ಕೇಳಿಬಂದಿತ್ತು. ಈ ಆಧಾರದಲ್ಲಿ ಕಂಪೆನಿಯ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಏಜೆನ್ಸಿ ಮಾನವ ಕಳ್ಳಸಾಗಾಟಕ್ಕೆ ಸಮಾನವಾದ ತಪ್ಪೆಸಗಿದೆ ಎಂದು ನಿರ್ಧರಿಸಿ ಏಜೆನ್ಸಿಯ ಲೈಸನ್ಸ್ನ್ನು ಅಧಿಕಾರಿಗಳು ರದ್ದುಪಡಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story