Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಮಣಿಪುರದಲ್ಲಿನ ಅವ್ಯವಸ್ಥೆ ಉದ್ದೇಶಪೂರ್ವಕ...

ಮಣಿಪುರದಲ್ಲಿನ ಅವ್ಯವಸ್ಥೆ ಉದ್ದೇಶಪೂರ್ವಕ ಸೃಷ್ಟಿಯಲ್ಲವೇ?

ಅಪೂರ್ವಾನಂದ್ಅಪೂರ್ವಾನಂದ್28 July 2023 11:52 AM IST
share
ಮಣಿಪುರದಲ್ಲಿನ ಅವ್ಯವಸ್ಥೆ ಉದ್ದೇಶಪೂರ್ವಕ ಸೃಷ್ಟಿಯಲ್ಲವೇ?
ಸ್ವತಃ ಸರಕಾರದ ಮತ್ತು ಪೊಲೀಸರ ಸಕ್ರಿಯ ನೆರವಿನೊಂದಿಗೆ ಬಹುಸಂಖ್ಯಾತ ಮೈತೈ ಗುಂಪುಗಳು ಕಣಿವೆಯನ್ನು ಸ್ವಾಧೀನಪಡಿಸಿಕೊಂಡಿವೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಸ್ವತಃ ಮುಖ್ಯಮಂತ್ರಿಯೇ ಈ ಗುಂಪುಗಳ ಪೋಷಕರಾಗಿದ್ದಾರೆ ಎಂಬ ಅಂಶವನ್ನು ಮುಚ್ಚಿಡುವಂತಿಲ್ಲ. ಆ ಗುಂಪುಗಳ ನಾಯಕರು ಕುಕಿ ಸಮುದಾಯವನ್ನು ನಿರ್ನಾಮ ಮಾಡುವ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಮುಕ್ತವಾಗಿ ತಿರುಗಾಡಲು ಬಿಡುವ ನಿರ್ಧಾರ ಕೇವಲ ಬಿರೇನ್ ಸಿಂಗ್ ಅವರದ್ದು ಎಂದು ನಾವು ನಂಬಬೇಕೇ?

ಮಣಿಪುರವನ್ನು ಧ್ವಂಸಗೊಳಿಸಿರುವ, ಇನ್ನೂ ನಡೆಯುತ್ತಿರುವ ಹಿಂಸಾಚಾರದಲ್ಲಿ ಕೇಂದ್ರ ಸರಕಾರದ ಪಾಲೂ ಇರುವ ಬಗ್ಗೆ ಪ್ರಶ್ನಿಸಲೇಬೇಕಾದ ಸಮಯ ಬಂದಿದೆ ಮತ್ತು ಅದಕ್ಕೆ ಪ್ರಧಾನಿಯನ್ನೇ ಹೊಣೆಗಾರರನ್ನಾಗಿ ಮಾಡಬೇಕಿದೆ. ಮಣಿಪುರದಲ್ಲಿ ಆರಂಭದಿಂದಲೇ ವಹಿಸಿದ ಮೌನದ ಪರಿಣಾಮವಾಗಿ ಇಡೀ ಈಶಾನ್ಯ ಪ್ರದೇಶದಲ್ಲಿ ಶಾಶ್ವತವಾದ ವಿಭಜನೆಯನ್ನು ಸೃಷ್ಟಿಸಲಾಯಿತು ಎಂದೇ ಹೇಳಬೇಕಾಗಿದೆ. ದೇಶದಲ್ಲಿ ಹೆಚ್ಚು ಹೆಚ್ಚು ಒಡಕು ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಿ ಆಳುವುದು ಸಾಧನೆಯೇನೂ ಅಲ್ಲ.

ಪಶ್ಚಿಮ ಬಂಗಾಳ ಅಥವಾ ಇತರ ರಾಜ್ಯಗಳಲ್ಲಿ ಈ.ಡಿ., ಸಿಬಿಐಗಳಂಥ ಏಜೆನ್ಸಿಗಳ ಮೂಲಕ ತುದಿಗಾಲಲ್ಲಿ ನಿಂತಂತೆ ಮಧ್ಯಪ್ರವೇಶಿಸುವ, ಜಮ್ಮು ಮತ್ತು ಕಾಶ್ಮೀರದಲ್ಲಿನ ಎಲ್ಲ ಧ್ವನಿಗಳನ್ನು ಅಡಗಿಸುವ ಸಾಮರ್ಥ್ಯ ಹೊಂದಿರುವ ಮೋದಿ ಸರಕಾರಕ್ಕೆ ಮಣಿಪುರದಲ್ಲಿ ಹಿಂಸಾಚಾರ ತಡೆಯಲು ಮಾತ್ರ ಹಾಗೆಂದು ಅದು ಹೇಳುತ್ತಿರುವುದರ ಹೊರತಾಗಿಯೂ ಸಾಧ್ಯವಾಗಲಿಲ್ಲ.

ವಿಶ್ಲೇಷಕರು ಮತ್ತು ಪ್ರತಿಪಕ್ಷಗಳು ಕೂಡ ಕೇಂದ್ರ ಸರಕಾರದ ಮೌನವನ್ನು ಅದರ ನಿರ್ದಯ ಉದಾಸೀನತೆಯ ನಡೆಯೆಂದು ಪರಿಗಣಿಸುತ್ತಿವೆ. ಬಿರೇನ್ ಸಿಂಗ್ ಮೇಲೆ ಅವು ಆರೋಪ ಮಾಡುತ್ತಿರುವುದು ಸರಿಯಾಗಿಯೇ ಇದೆ. ಆದರೆ ಕೇಂದ್ರ ಸರಕಾರದ ವೈಫಲ್ಯವನ್ನು ಹೇಗೆ ವಿವರಿಸುವುದು?

ಭಾರೀ ಪ್ರಮಾಣದ ಕೇಂದ್ರ ಭದ್ರತಾ ಪಡೆಗಳು ಮತ್ತು ರಾಜ್ಯ ಸರಕಾರಕ್ಕೆ ಸಹಾಯ ಮಾಡಲು ತನ್ನ ವಿಶೇಷ ಪ್ರತಿನಿಧಿಯನ್ನು ಕಳುಹಿಸುವ ಮೂಲಕ ತನ್ನ ಅಸಾಧಾರಣ ಶಕ್ತಿಯ ಹೊರತಾಗಿಯೂ ಮಣಿಪುರದಲ್ಲಿ ಹಿಂಸಾಚಾರವನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ನರೇಂದ್ರ ಮೋದಿ ಸರಕಾರ ಹೇಳಬಹುದೇ?

ಇದು ವೈಫಲ್ಯವೇ ಅಥವಾ ಹಿಂಸಾಚಾರವನ್ನು ನಿಲ್ಲಿಸಲು ಇಷ್ಟವಿಲ್ಲವೇ?

ಹಿಂಸಾಚಾರ, ವಿಶೇಷವಾಗಿ ಕೋಮು ಹಿಂಸಾಚಾರ 24 ಗಂಟೆಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ಅಧಿಕಾರಿಗಳು ಅದನ್ನು ನಿಲ್ಲಿಸಲು ಬಯಸುವುದಿಲ್ಲ ಮತ್ತು ಅದರ ಭಾಗವಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕ ಸೇವೆಯಲ್ಲಿರುವವರು ಹೇಳುತ್ತಾರೆ. ಹೀಗಿರುವಾಗ ಸುಮಾರು ಮೂರು ತಿಂಗಳ ಕಾಲ ಇಡೀ ರಾಜ್ಯ ಜನಾಂಗೀಯ ಹಿಂಸಾಚಾರದಲ್ಲಿ ಮುಳುಗಿದೆ ಎಂದರೆ ಏನರ್ಥ? ರಕ್ತಪಾತವನ್ನು ನಿಲ್ಲಿಸಲು ರಾಜ್ಯ ಸರಕಾರ ಹೆಚ್ಚು ಉತ್ಸುಕವಾಗಿಲ್ಲ ಎಂಬುದು ಮೊದಲ ದಿನದಿಂದಲೇ ಸ್ಪಷ್ಟವಾಗಿದೆ. ಆಂತರಿಕ ಭದ್ರತೆಯ ಹೆಸರಿನಲ್ಲಿ ತನ್ನ ಎಲ್ಲಾ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಸರಕಾರ, ಇತರ ದೇಶಗಳ ಗಡಿಯಲ್ಲಿರುವ ರಾಜ್ಯಗಳ ದೊಡ್ಡ ಪ್ರದೇಶಗಳ ಭದ್ರತೆಯ ನಿಯಂತ್ರಣವನ್ನು ತೆಗೆದುಕೊಂಡಿದೆ. ಮಣಿಪುರದಂತಹ ಗಡಿ ರಾಜ್ಯ ಮೂರು ತಿಂಗಳ ಕಾಲ ಹೊತ್ತಿ ಉರಿಯುವುದಕ್ಕೆ ಅನುವು ಮಾಡಿಕೊಟ್ಟಿದೆ.

ಈ ಉದ್ದೇಶಪೂರ್ವಕ ಅಸಹಾಯಕತೆಯ ಹಿಂದೆ ಒಂದು ಹುನ್ನಾರ ಇದ್ದಿರಲೇಬೇಕು.

ಅದರ ಬಗ್ಗೆ ಮಾತನಾಡುವ ಮೊದಲು ಹಿಂಸೆಯ ಸ್ವರೂಪವನ್ನು ವಿವರಿಸಬೇಕು. ಸ್ವತಃ ಸರಕಾರದ ಮತ್ತು ಪೊಲೀಸರ ಸಕ್ರಿಯ ನೆರವಿನೊಂದಿಗೆ ಬಹುಸಂಖ್ಯಾತ ಮೈತೈ ಗುಂಪುಗಳು ಕಣಿವೆಯನ್ನು ಸ್ವಾಧೀನಪಡಿಸಿಕೊಂಡಿವೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಸ್ವತಃ ಮುಖ್ಯಮಂತ್ರಿಯೇ ಈ ಗುಂಪುಗಳ ಪೋಷಕರಾಗಿದ್ದಾರೆ ಎಂಬ ಅಂಶವನ್ನು ಮುಚ್ಚಿಡುವಂತಿಲ್ಲ. ಆ ಗುಂಪುಗಳ ನಾಯಕರು ಕುಕಿ ಸಮುದಾಯವನ್ನು ನಿರ್ನಾಮ ಮಾಡುವ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಮುಕ್ತವಾಗಿ ತಿರುಗಾಡಲು ಬಿಡುವ ನಿರ್ಧಾರ ಕೇವಲ ಬಿರೇನ್ ಸಿಂಗ್ ಅವರದ್ದು ಎಂದು ನಾವು ನಂಬಬೇಕೇ? ಈ ಬಂಡುಕೋರರನ್ನು ಮುಖ್ಯಮಂತ್ರಿ ಹದ್ದುಬಸ್ತಿನಲ್ಲಿಡುವಂತಾಗಲು ಮೋದಿ ಸರಕಾರ ಮತ್ತು ಮಣಿಪುರದಲ್ಲಿ ಕುಳಿತಿರುವ ಅದರ ವಿಶೇಷ ಪ್ರತಿನಿಧಿ ಏನನ್ನೂ ಮಾಡುವುದಕ್ಕೆ ಸಾಧ್ಯವಿಲ್ಲವೇ?

ಇಂಫಾಲದಲ್ಲಿನ ರಾಜ್ಯ ಸರಕಾರದ ಹಾಗೆಯೇ ಕೇಂದ್ರದ ಮೋದಿ ಸರಕಾರವೂ ಈ ಬಹುಸಂಖ್ಯಾಕ ಹಿಂಸಾಚಾರವನ್ನು ಕೊನೆಗೊಳಿಸಲು ಆಸಕ್ತಿ ಹೊಂದಿಲ್ಲವೇ? ಒಂದು ನಿರ್ದಿಷ್ಟ ಉದ್ದೇಶವನ್ನು ಸಾಧಿಸಲು ಈ ಹಿಂಸಾಚಾರ ತನಗೆ ಅನುಕೂಲ ಮಾಡಿಕೊಡಲಿ ಎಂದು ಅದು ಬಯಸುತ್ತದೆಯೆ? ಮಣಿಪುರದಲ್ಲಿ ಶಾಶ್ವತ ವಿಭಜನೆಯನ್ನು ಉಂಟುಮಾಡುವುದು ಮತ್ತು ಅದರಿಂದ ರಾಜ್ಯ ಮತ್ತದರ ಸಂಪನ್ಮೂಲಗಳನ್ನು ಕೂಡ ವಿಭಜಿಸುವ ಮೂಲಕ ತಾನು ಬಯಸಿದ ನಿಯಂತ್ರಣವನ್ನು ಸಾಧಿಸುವುದು ಈ ಹುನ್ನಾರವೆ?

ಬಿಕ್ಕಟ್ಟು ಇನ್ನೂ ಮುಂದುವರಿಯುತ್ತಿರುವಂತೆಯೇ, ಮಣಿಪುರ ಹಿಂಸಾಚಾರ ರಾಜ್ಯದ ಗಡಿಯನ್ನು ಮೀರಿ ತನ್ನ ಕಟು ಪರಿಣಾಮಗಳನ್ನು ಬೀರುವುದನ್ನು ನೋಡುತ್ತಿದ್ದೇವೆ. ಕುಕಿಗಳ ಮೇಲಿನ ದಾಳಿ ಈಗಾಗಲೇ ಮಿಜೋರಾಂನಲ್ಲಿ ಆತಂಕವನ್ನು ಸೃಷ್ಟಿಸಿದೆ. ಈಗ ಮಿಜೋರಾಂನಲ್ಲಿ ಮೈತೈಗಳು ಬೆದರಿಕೆಗಳಿಗೆ ತುತ್ತಾಗುತ್ತಿದ್ದಾರೆ. ಮಣಿಪುರ ಮುಖ್ಯಮಂತ್ರಿಯ ಮೊದಲ ಮತ್ತು ತಕ್ಷಣದ ಪ್ರತಿಕ್ರಿಯೆಯಾಗಿ, ಮೈತೈಗಳನ್ನು ಸ್ಥಳಾಂತರಿಸಲು ವಿಶೇಷ ವಿಮಾನಗಳನ್ನು ಒದಗಿಸುವ ಘೋಷಣೆ ಹೊರಬಿದ್ದಿದೆ. ಹಿಂಸಾಚಾರ ಮತ್ತು ಅಭದ್ರತೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವನ್ನು ರಾಜ್ಯವಾಗಲೀ ಕೇಂದ್ರ ಸರಕಾರವಾಗಲೀ ಮನಗಾಣುತ್ತಿಲ್ಲ. ಇನ್ನೊಂದೆಡೆ, ಅಸ್ಸಾಮಿನ ಬರಾಕ್ ಕಣಿವೆಯಲ್ಲಿ ವಾಸಿಸುವ ಮಿಜೋಗಳಿಗೆ ಮೈತೈ ಗುಂಪುಗಳು ಬೆದರಿಕೆ ಒಡ್ಡಿವೆ. ತೀವ್ರ ಗತಿಯಲ್ಲಿ ಚಡಪಡಿಕೆ ಶುರುವಾಗಿದೆ. ಮೇಘಾಲಯದಲ್ಲಿ ಹಿಂಸಾಚಾರದ ಆರಂಭಿಕ ದಿನಗಳಲ್ಲಿ ಮಣಿಪುರದಿಂದ ಸ್ಥಳಾಂತರಗೊಂಡ ಜನರಿಗೆ ಆತಿಥ್ಯ ನೀಡಬಾರದು ಎಂದು ಸ್ಥಳೀಯ ಗುಂಪುಗಳು ಹೇಳಿದ್ದವು.

ಎನ್ಆರ್ಸಿಗಾಗಿ ಮೈತೈಗಳು ಬೇಡಿಕೆ ಇಡುತ್ತಿದ್ದು, ಇದು ಖಂಡಿತವಾಗಿಯೂ ಇತರ ಪ್ರದೇಶಗಳಲ್ಲಿ ಪ್ರತಿಧ್ವನಿಸಲಿದೆ. ಏಕೆಂದರೆ ಎಲ್ಲಾ ಸ್ಥಳೀಯರು ತಮ್ಮ ಭೂಮಿಯನ್ನು ಹೊರಗಿನವರಿಂದ ರಕ್ಷಿಸಲು ಬಯಸುತ್ತಾರೆ.

ದಶಕಗಳ ಘರ್ಷಣೆಗಳ ನಂತರ ಸಹಜ ಸ್ಥಿತಿಗೆ ಬರುತ್ತಿದ್ದ ಇಡೀ ಪ್ರದೇಶ ಈಗ ಅಸ್ಥಿರವಾಗಿದೆ. ಸುಮ್ಮನಿದ್ದ ಉಗ್ರಗಾಮಿ ಬಣಗಳು ಇನ್ನು ಮುಂದೆ ರಾಜ್ಯ ಸರಕಾರಗಳನ್ನು ನಂಬುವುದಿಲ್ಲವಾದ್ದರಿಂದ ತಮ್ಮ ಸಮುದಾಯಗಳ ಬೆಂಬಲದೊಂದಿಗೆ ಮರುಸಂಘಟನೆಗೆ ಮತ್ತು ಪುನಶ್ಚೇತನಗೊಳ್ಳುವುದಕ್ಕೆ ಪ್ರಯತ್ನಿಸುತ್ತವೆ ಎಂಬುದನ್ನು ಊಹಿಸುವುದು ಕಷ್ಟವಲ್ಲ.

ಕಳೆದ ಹಲವು ದಶಕಗಳಿಂದ ಬಹುಪಾಲು ಜನರು ವಿರೋಧಿಸುತ್ತಿರುವುದರ ನಡುವೆಯೇ, ಸಶಸ್ತ್ರ ಪಡೆಗಳ ಸಾಮಾಜಿಕ ಅಧಿಕಾರಗಳ ಕಾಯ್ದೆ (ಎಎಫ್ಎಸ್ಪಿಎ) ಹೇರಬೇಕೆಂದು ಮಣಿಪುರಿಗಳ ಒಂದು ವಿಭಾಗ ಒತ್ತಾಯಿಸುತ್ತಿರುವುದು ಕೂಡ ವಿಪರ್ಯಾಸ.

ಮೋದಿ ಸರಕಾರದ ಕೈವಾಡವಿಲ್ಲದೆ ಇದೆಲ್ಲ ನಡೆಯುತ್ತಿದೆ ಎಂದು ಭಾವಿಸುವುದು ಅಪಾಯಕಾರಿ ಮುಗ್ಧತೆಯಾಗುತ್ತದೆ. ರಾಷ್ಟ್ರದ ಬಗ್ಗೆ ಕಾಳಜಿ ವಹಿಸುವ ಯಾವುದೇ ಸರಕಾರ ದೇಶ ಮತ್ತು ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಎಲ್ಲವನ್ನೂ ಮಾಡುತ್ತದೆ. ಆದರೆ ಮೋದಿ ಸರಕಾರ ಅವ್ಯವಸ್ಥೆಯನ್ನೇ ಸೃಷ್ಟಿಸಿದೆ.

ಅವ್ಯವಸ್ಥೆ, ಅನಿಶ್ಚಿತತೆ ಮತ್ತು ಅಸ್ಥಿರತೆ ಸರ್ವಾಧಿಕಾರಿ ಸರಕಾರಗಳಿಗೆ ಬಹಳ ಸಹಾಯಕ. ಏಕೆಂದರೆ ಅವು ಜನರ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡುತ್ತವೆ.

ಅವರು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ ಮತ್ತು ಮೌನವಾಗಿಬಿಡುತ್ತಾರೆ. ನೋಟು ಅಮಾನ್ಯ, ಜಿಎಸ್ಟಿ ಮತ್ತು ಹಠಾತ್ ಲಾಕ್ಡೌನ್ ಮೂಲಕ ಮೋದಿ ಸರಕಾರ ಜನರ ಜೀವನವನ್ನು ಅಸ್ಥಿರಗೊಳಿಸಿದ್ದನ್ನು ನಾವು ನೋಡಿದ್ದೇವೆ. ಕೋವಿಡ್ ಎರಡನೇ ಅಲೆಯ ಸಮಯದಲ್ಲಿ, ಜನರು ಹತಾಶೆಯಿಂದ ಚಡಪಡಿಸುವಂತಾಗಲು ಮತ್ತು ತೀರಾ ಅಸಹಾಯಕ ಸನ್ನಿವೇಶದಲ್ಲಿ ಮಧ್ಯಪ್ರವೇಶಿಸಿ ತಾನು ಜನರ ನೆರವಿಗೆ ಬಂದಂಥ ಭಾವನೆ ಮೂಡಿಸಲು ಅದು ಆಮ್ಲಜನಕ ಪೂರೈಕೆ ನಿಯಂತ್ರಿಸಿದ್ದನ್ನು ನೋಡಿದ್ದೇವೆ.

ಮಣಿಪುರದಲ್ಲಿನ ಅಸ್ಥಿರತೆ ಮತ್ತು ಹಿಂಸಾಚಾರ ಬಿಜೆಪಿ ಸರಕಾರಕ್ಕೆ ಒಳ್ಳೆಯದು. ಏಕೆಂದರೆ ಅದು ಹಿಂದಿ ಬೆಲ್ಟ್ನಲ್ಲಿನ ಮತದಾರರಿಗೆ ಬೆದರಿಕೆಯೊಡ್ಡುವ ಮತ್ತು ಭರವಸೆ ನೀಡುವ ತಂತ್ರ ಬಳಸುವ ಮೂಲಕ ಚುನಾವಣೆ ಗೆಲ್ಲುವ ಹಾದಿ ಸುಗಮಗೊಳಿಸಿಕೊಳ್ಳಬಹುದು. ಈಶಾನ್ಯ ಪ್ರದೇಶವನ್ನು ಹೊರಗಿನವರು ವಶಪಡಿಸಿಕೊಳ್ಳುವ ಬೆದರಿಕೆ ಸೃಷ್ಟಿಸಿ, ಅದನ್ನು ತಾನು ನಿಯಂತ್ರಿಸುವ ಭರವಸೆ ನೀಡುವುದು ಈ ತಂತ್ರ. ಇಲ್ಲಿ ಹೊರಗಿನವರು ಬೇರೆ ಯಾರೂ ಅಲ್ಲ. ಅದು ಮೋದಿ ನೇತೃತ್ವದ ಬಿಜೆಪಿ ತನ್ನ ಭದ್ರತೆಗಾಗಿ ಮತದಾರರನ್ನು ಹೆದರಿಸಲು ಮತ್ತು ತನ್ನ ಪರವಾಗಿ ಅವರು ಮತ ಚಲಾಯಿಸುವಂತೆ ಮಾಡಲು ಯತ್ನಿಸುತ್ತಿರುವ ಈ ತಂತ್ರವೇ ಆಗಿದೆ.

ಮಣಿಪುರದ ವಿಚಾರದಲ್ಲಿ ಮೋದಿ ವಹಿಸಿರುವುದು ಮೌನವಲ್ಲ. ಬದಲಿಗೆ ಇದು ಹಿಂಸಾಚಾರವನ್ನು ಕೊನೆಗಾಣಿಸುವುದರ ಬಗೆಗಿನ ನಿರಾಕರಣೆ. ಇದು ಹಿಂಚಾಚಾರದಲ್ಲಿನ ಅವರ ಪಾಲುದಾರಿಕೆಗೆ ಪುರಾವೆ. 78 ದಿನಗಳ ಬಳಿಕ ಬಿಕ್ಕಟ್ಟಿನ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಾಗಲೂ ಅವರು ಮಣಿಪುರದ ಬಗ್ಗೆ ಒಂದು ಮಾತನ್ನೂ ಆಡದೆ ವೈರಲ್ ವೀಡಿಯೊಗೆ ಸಂಬಂಧಿಸಿದ ಘಟನೆಯ ಬಗ್ಗೆ ಮಾತ್ರ ಮಾತನಾಡಿದರು ಎಂಬುದನ್ನು ಗಮನಿಸಬೇಕು. ಅದನ್ನೇ ಅನುಸರಿಸಿ ಅವರ ಮಂತ್ರಿಗಳು ಮತ್ತು ಟಿವಿ ನಿರೂಪಕರು ಇಡೀ ಘಟನೆಯನ್ನು ಮಹಿಳೆಯರ ಮೇಲಿನ ದೌರ್ಜನ್ಯ ಎಂಬುದಕ್ಕೆ ಸೀಮಿತಗೊಳಿಸಿದರೇ ಹೊರತು, ಆ ವೀಡಿಯೊದಲ್ಲಿ ಕಂಡುಬಂದ ಮಹಿಳೆಯರ ಮೇಲಿನ ಹೇಯ ದಾಳಿ ಮಣಿಪುರ ಹಿಂಸಾಚಾರದ ಭೀಕರ ಪರಿಣಾಮ ಎಂಬುದನ್ನು ಪೂರ್ತಿಯಾಗಿ ಮರೆಮಾಚಿದರು.

ಇವೆಲ್ಲವೂ ನಮ್ಮನ್ನು ಒಂದೇ ಒಂದು ತೀರ್ಮಾನದೆಡೆಗೆ ಕೊಂಡೊಯ್ಯುತ್ತದೆ: ಮಣಿಪುರ ಹಿಂಸಾಚಾರದ ಬಗ್ಗೆ ಮೋದಿ ಸರಕಾರ ತಲೆಕೆಡಿಸಿಕೊಂಡಿಲ್ಲ. ಅದರ ಮೌನ ಮತ್ತು ನಿಷ್ಕ್ರಿಯತೆ, ಈಗಿನ ಅಸ್ತವ್ಯಸ್ತ ಸ್ಥಿತಿ ಬಿಜೆಪಿಗೆ ಅನುಕೂಲಕರ ಎಂಬ ಅದರ ಭಾವನೆಯ ಸಂಕೇತವಾಗಿದೆ. ಈ ಬಹುಸಂಖ್ಯಾಕ ರಾಜಕೀಯದಿಂದ ಭಾರತವನ್ನು ತುಂಡು ತುಂಡಾಗಿ ಕಬಳಿಸಿದರೆ ಚಿಂತಿಸುವವರು ಯಾರು?

thewire.in(ಕೃಪೆ: )

share
ಅಪೂರ್ವಾನಂದ್
ಅಪೂರ್ವಾನಂದ್
Next Story
X