Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ‘ಬಂಡಾಯದ ಕಲಿ’ ಕಾಗೋಡು ತಿಮ್ಮಪ್ಪರಿಗೆ...

‘ಬಂಡಾಯದ ಕಲಿ’ ಕಾಗೋಡು ತಿಮ್ಮಪ್ಪರಿಗೆ ಒಲಿದ ದೇವರಾಜ ಅರಸು ಪ್ರಶಸ್ತಿ

ಶರತ್ ಪುರದಾಳ್ಶರತ್ ಪುರದಾಳ್20 Aug 2023 11:15 AM IST
share
‘ಬಂಡಾಯದ ಕಲಿ’ ಕಾಗೋಡು ತಿಮ್ಮಪ್ಪರಿಗೆ ಒಲಿದ ದೇವರಾಜ ಅರಸು ಪ್ರಶಸ್ತಿ
ಹಿಂದುಳಿದ ವರ್ಗಗಳ ನಾಯಕನ ಪಟ್ಟ ಹಿಂದುಳಿದ ವರ್ಗಕ್ಕೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಗೇಣಿದಾರರಾಗಿದ್ದರು. ಭೂಸುಧಾರಣೆ ಕಾಯ್ದೆ ಜಾರಿಗೆ ತಂದು ಭೂ ಮಾಲಕರ ಶೋಷಣೆಯಿಂದ ತಪ್ಪಿಸಿ, ಲಕ್ಷಾಂತರ ಗೇಣಿದಾರರಿಗೆ ಭೂಮಿ ಹಕ್ಕನ್ನು ದೊರಕಿಸುವ ಮೂಲಕ ಐತಿಹಾಸಿಕ ದಾಖಲೆ ಸೃಷ್ಟಿಸಿದರು. ಅಂದಿನಿಂದ ಇಂದಿನವರೆಗೆ ಕಾಗೋಡು ತಿಮ್ಮಪ್ಪನವರು ಹಿಂದುಳಿದ ವರ್ಗಗಳ ನಾಯಕನೆಂದೇ ಗುರುತಿಸಿಕೊಂಡಿದ್ದಾರೆ.

ಇಂದು ಪ್ರಶಸ್ತಿ ಪ್ರದಾನ

ಕಾಗೋಡು ತಿಮ್ಮಪ್ಪ ಅವರಿಗೆ ಪ್ರಸಕ್ತ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಆ.೨೦ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿರುವ ಡಿ.ದೇವರಾಜ ಅರಸು ಅವರ ೧೦೮ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆ.

ಗೇಣಿದಾರರ, ಕೃಷಿ ಕಾರ್ಮಿಕ, ಗಿರಿಜನ, ದೀನದಲಿತರ ಆಶಾಕಿರಣ ಮಾಜಿ ಸಚಿವ ಹಾಗೂ ವಿಧಾನಸಭಾ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ರಾಜ್ಯ ಸರಕಾರ ಆಯ್ಕೆ ಮಾಡಿದೆ.

ರೈತ ಹೋರಾಟದ ಭೂಮಿಯಾದ ಕಾಗೋಡು ಗ್ರಾಮ ತಿಮ್ಮಪ್ಪನವರ ಹುಟ್ಟೂರು. ೧೯೩೨ರ ಸೆಪ್ಟಂಬರ್ ೧೦ರಂದು ಸವಾಜಿ ಬೀರಾನಾಯ್ಕ ಮತ್ತು ಬೈರಮ್ಮ ದಂಪತಿಗೆ ೩ನೇ ಮಗನಾಗಿ ಜನಿಸಿದರು.

೧೯೫೨ರಲ್ಲಿ ಐತಿಹಾಸಿಕ ಕಾಗೋಡು ಸತ್ಯಾಗ್ರಹ ಚಳವಳಿಯನ್ನು ಎಚ್.ಗಣಪತಿಯಪ್ಪ ಅವರು ಆರಂಭಿಸಿದ್ದಾಗ ಕಾಗೋಡು ತಿಮ್ಮಪ್ಪನವರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದರು. ಗೇಣಿ ರೈತರ ಸಮಸ್ಯೆಯ ಅರಿವು, ಭೂಮಾಲಕರ ಶೋಷಣೆ, ದೌರ್ಜನ್ಯವನ್ನು ಅವರು ಹತ್ತಿರದಿಂದ ಕಂಡಿದ್ದವರು. ಬಡ ಗೇಣಿದಾರರ ಕುಟುಂಬದಲ್ಲಿ ಜನಿಸಿದ್ದ ತಿಮ್ಮಪ್ಪ ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ್ದವರು.

ವಿದ್ಯಾಭ್ಯಾಸ ಮುಗಿಸಿ ಸಾಗರದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಮೇಲೆ ಕಾಗೋಡು ತಿಮ್ಮಪ್ಪನವರಿಗೆ ಹೆಚ್ಚಾಗಿ ಗೇಣಿ ರೈತರ ಸಮಸ್ಯೆಯ ಕೇಸುಗಳೇ ಬರುತ್ತಿದ್ದವು. ಹಣಕ್ಕೆ ಒತ್ತಾಯಿಸದೆ ಅವುಗಳನ್ನು ನಡೆಸುತ್ತಿದ್ದರು. ಜೊತೆಗೆ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅವರು ರೈತ ಪರ ಹೋರಾಟಕ್ಕಾಗಿ ಹಳ್ಳಿ ಹಳ್ಳಿಗಳಿಗೆ ಸೈಕಲ್ ಮೇಲೆ ಸಮಾಜವಾದಿ ಹೋರಾಟಗಾರರೊಡನೆ ಪ್ರವಾಸ ಮಾಡಿ ಜನ ಜಾಗೃತಿಗೊಳಿಸಿದ್ದರು.

ಸಮಾಜವಾದಿ ಪಕ್ಷವು ೧೯೬೨ರಲ್ಲಿ ತಿಮ್ಮಪ್ಪನವರನ್ನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಪರಭಾವಗೊಂಡಿದ್ದರು. ಈ ಸೋಲನ್ನು ಸವಾಲಾಗಿ ಸ್ವೀಕರಿಸಿದ ಕಾಗೋಡು ತಿಮ್ಮಪ್ಪ, ಗೇಣಿದಾರರು, ಕೃಷಿ ಕಾರ್ಮಿಕರು, ದಲಿತರ ಧ್ವನಿಯಾಗಿ ಜನಪ್ರಿಯರಾದರು. ೧೯೭೨ ರ ವಿಧಾನಸಭೆಯ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿ ಜಯಗಳಿಸಿದಾಗ ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದರು. ಅರಸು ಅವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತರಲು ಮುಂದಾದಾಗ ಜಾಯಿಂಟ್ ಸೆಲೆಕ್ಟ್ ಕಮಿಟಿಯಲ್ಲಿ ಸದಸ್ಯರಾಗಿ ಕ್ರಾಂತಿಕಾರಕ ಭೂ ಸುಧಾರಣಾ ಕಾಯ್ದೆ ಜಾರಿಗೆ ತರಲು ಕಾರಣರಾದರು. ಅರಸು ಅವರ ನೀಲಿಗಣ್ಣಿನ ಹುಡುಗ ಎಂದೇ ಖ್ಯಾತರಾದರು.

ಸದನದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಯ ಕುರಿತು ಚರ್ಚೆ ನಡೆದಾಗ ಕಾಗೋಡು ತಿಮ್ಮಪ್ಪನವರು ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂಬುವುದಕ್ಕೆ ವಿಧಾನಸಭಾ ಕಡತಗಳಲ್ಲಿ ದಾಖಲಾಗಿರುವುದು ಸಾಕ್ಷಿಯಾಗಿದೆ.

ಜಾಯಿಂಟ್ ಸೆಲೆಕ್ಟ್ ಕಮಿಟಿಯಲ್ಲಿದ್ದ ತಿಮ್ಮಪ್ಪನವರು ೧೯೭೩ರಲ್ಲಿ ಸಂಡೂರು ಭೂ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿ ಸಂಡೂರು ಇನಾಂ ರದ್ದತಿ ಮಸೂದೆ ಜಾರಿಯಾಗಲು ಕಾರಣಿಕರ್ತರಾಗಿದ್ದರು. ಭೂ ಸುಧಾರಣೆ ಕಾಯ್ದೆಗೆ ಪ್ರಬಲ ವಿರೋಧ ವ್ಯಕ್ತವಾದಾಗ ಕಾಯ್ದೆಯನ್ನು ಸಮರ್ಥಿಸಿಕೊಂಡು ಗೇಣಿದಾರರಿಗೆ ಸುಲಭವಾಗಿ ಭೂಮಿ ಹಕ್ಕು ಸಿಗುವಂತೆ ನೋಡಿಕೊಂಡರು.ಕಾಯ್ದೆಗಳಲ್ಲಿ ತೊಡಕುಗಳನ್ನು ನಿವಾರಣೆ ಮಾಡಲು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಸಲಹೆ ನೀಡಿ ಅವರಿಗೆ ಆಪ್ತರಾದರು.

ಕಾಗೋಡು ತಿಮ್ಮಪ್ಪನವರಿಗೆ ಭೂ ಸುಧಾರಣೆ ಕಾಯ್ದೆ ರಾಜಕೀಯವಾಗಿ ಲಾಭ ತಂದು ಕೊಡಲಿಲ್ಲ. ಭೂ ಸುಧಾರಣೆ ಕಾಯ್ದೆ ಮೂಲಕ ತಮ್ಮ ಭೂಮಿ ಕಸಿದುಕೊಂಡರು ಎಂಬ ಕಾರಣಕ್ಕೆ ಕೆಲವು ವರ್ಗದವರು (ಭೂ ಮಾಲಕರು) ಅವರನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಭೂಮಿ ಕಳೆದುಕೊಂಡವರ ಮುನಿಸು ಅವರ ಅನೇಕ ಚುನಾವಣೆಯ ಸೋಲಿಗೆ ಕಾರಣವಾಗಿದೆ. ಆದರೆ, ಸೋಲಿಗೆ ಎಂದಿಗೂ ಧೃತಿಗೆಡಲಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ‘ವಾಸಿಸುವವನೆ ಮನೆಯೊಡೆಯ’ ಎಂಬ ಕ್ರಾಂತಿಕಾರಕ ಕಾಯ್ದೆ ಜಾರಿಗೊಳಿಸಿ ಜನಪರ ಕಾಯ್ದೆ ರೂಪಿಸಿದ ಹೆಗ್ಗಳಿಕೆಗೆ ಪಾತ್ರರಾದರು.

ಇಳಿ ವಯಸ್ಸಿನಲ್ಲೂ ಅನೇಕ ಹೋರಾಟ, ಸಭೆಗಳಲ್ಲಿ ಭಾಗವಹಿಸುವ ಅವರು ಗೇಣಿ ಹೋರಾಟ, ಭೂ ಸುಧಾರಣೆ ಕಾಯ್ದೆ ವಿಚಾರಗಳನ್ನು ಪ್ರಸ್ತಾಪಿಸದೆ ಭಾಷಣ ಮುಕ್ತಾಯವಾಗುತ್ತಿರಲಿಲ್ಲ. ನೇರ, ನಿಷ್ಠುರದ ಕಾಗೋಡು ಅವರು ‘ಬಂಡಾಯದ ಒಡೆಯ’ ಎಂದೇ ಪ್ರಖ್ಯಾತರಾದವರು. ಸದಾ ಸಾಮಾಜಿಕ ನ್ಯಾಯದ ಪರವಾಗಿ ತುಡಿತ ಹೊಂದಿರುವ ಅವರಿಗೆ ರಾಜ್ಯ ಸರಕಾರ ದೇವರಾಜ ಅರಸು ಪ್ರಶಸ್ತಿ ಘೋಷಿಸಿದೆ. ಸಾಗರ ತಾಲೂಕಿಗೆ ಎರಡನೇ ಬಾರಿ ದೇವರಾಜ ಅರಸು ಪ್ರಶಸ್ತಿ ದೊರಕಿದೆ. ಈ ಹಿಂದೆ ಕಾಗೋಡು ಸತ್ಯಾಗ್ರಹದ ರೂವಾರಿ ಎಚ್.ಗಣಪತಿಯಪ್ಪ ಅವರಿಗೆ ಈ ಗೌರವ ಲಭ್ಯವಾಗಿತ್ತು.

share
ಶರತ್ ಪುರದಾಳ್
ಶರತ್ ಪುರದಾಳ್
Next Story
X