ಎ.20ರಿಂದ ಕದ್ರಿ ಉದ್ಯಾನವನದಲ್ಲಿ ಪ್ರವೇಶ ಶುಲ್ಕ
ಮಂಗಳೂರು, ಎ.17: ಕದ್ರಿ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಂಗೀತ ಕಾರಂಜಿ/ಲೇಸರ್ ಶೋ ಹಾಗೂ ಉದ್ಯಾನವನ ವೀಕ್ಷಣೆಗೆ ಬರುವ ಸಾರ್ವಜನಿಕರಿಂದ ಎ.20ರಿಂದ ಪ್ರವೇಶ ಶುಲ್ಕವನ್ನು ಕದ್ರಿ ಅಭಿವೃದ್ದಿ ಸಮಿತಿಯ ನಿರ್ಣಯದಂತೆ ನಿಗದಿಪಡಿಸಲಾಗಿದೆ.
ಸಂಗೀತ ಕಾರಂಜಿ ಮತ್ತು ಲೇಸರ್ ಶೋ ವೀಕ್ಷಣೆಗೆ ವಯಸ್ಕರಿಗೆ ರೂ. 50, ಮಕ್ಕಳಿಗೆ ರೂ. 25, (6 ವರ್ಷದಿಂದ 12 ವರ್ಷದೊಳಗೆ), ಹಳೆ ಜಿಂಕೆ ಉದ್ಯಾನವನ ವೀಕ್ಷಣೆಗೆ ವಯಸ್ಕರಿಗೆ ರೂ. 10, ಮಕ್ಕಳಿಗೆ ರೂ. 5 (6 ವರ್ಷದಿಂದ 12 ವರ್ಷದೊಳಗೆ) ಆಗಿರುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಇವರ ಪ್ರಕಟನೆ ತಿಳಿಸಿದೆ.
Next Story