ಹಜ್ ಯಾತ್ರೆ: ಕಂದಕ್ ಮುಸ್ಲಿಂ ಜಮಾಅತ್ನಿಂದ ಬೀಳ್ಕೊಡುಗೆ
ಮಂಗಳೂರು, ಜು.11: ಸಮೀಪದ ಕಂದಕ್ ಪ್ರದೇಶದಲ್ಲಿರುವ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಶೇಕಬ್ಬ ಮುಸ್ಲಿಯಾರ್ ಹಾಗೂ ಕಂದಕ್ ಮುಸ್ಲಿಂ ಜಮಾತಿನ ಅಧ್ಯಕ್ಷ ಅಬ್ಬಾಸ್ ಹಾಜಿ ಹಜ್ ಯಾತ್ರೆಗೆ ತೆರಳಲಿದ್ದು, ಈ ಪ್ರಯುಕ್ತ ಕಂದಕ್ ಮುಸ್ಲಿಂ ಜಮಾಅತ್ ನಿಂದ ಬೀಳ್ಕೊಡಿಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಜುಮಾ ಮಸೀದಿ ಖತೀಬರಾದ ಸದಕತುಲ್ಲಾ ಫೈಝಿ ಹಾಗೂ ಅಲ್ ಅಝ್ಹರಿಯಾ ಮದ್ರಸದ ಮುದರಿಸ್ ಹೈದರ್ ಮದನಿ ದುವಾ ಆಶೀರ್ವಚನಗೈದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್, ಜಮಾತಿನ ಸದಸ್ಯರಾದ ಇಬ್ರಾಹೀಂ ಹಾಜಿ (ಇಬ್ಬಿ), ಹಾಜಿ ಅಬ್ದುಲ್ ಖಾದರ್ ಹಾಜಿ, ಕೆ.ಪಿ.ಮೊಯಿದಿನ್, ಗಪೂರ್, ಸಿದ್ದೀಕ್, ಅಶ್ರಫ್, ಮುಸ್ತಫಾ, ಫಯಾಝ್, ಆಸಿಫ್, ಅಬ್ದುಲ್ ರೆಹಮಾನ್, ರಿಯಾಝ್ ಹಾಜಿ, ಸೆಂಟ್ರಲ್ ಕಮಿಟಿ ಮುಸ್ತಫಾ ಕಸೈಗಲ್ಲಿ ಮೊದಲಾದವರು ಉಪಸ್ಥಿತರಿದ್ದರು.
Next Story