ಮಟ್ಕಾ ದಂಧೆ: ಆರೋಪಿ ಬಂಧನ
ಮಂಗಳೂರು, ಜು.19: ನಗರದ ಹೊರವಲಯದ ಅಸೈಗೊಳಿಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಭಾಸ್ಕರ್ ಎಂಬಾತನನ್ನು ಕೊಣಾಜೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಈತನಿಂದ 6 ಸಾವಿರ ರೂ. ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಪೊಲೀಸ್ ಫೋನ್ಇನ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ತಕ್ಷಣ ಕೊಣಾಜೆ ಪೊಲೀಸರಿಗೆ ಕಾರ್ಯಾಚರಣೆ ನಡೆಸುವಂತೆ ಆಯುಕ್ತರು ನೀಡಿದ ಸೂಚನೆ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
Next Story