ಪುತ್ತೂರು: ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ‘ಪ್ರಾಜೆಕ್ಟ್ ವರ್ಕ್ ವಸ್ತು ಪ್ರದರ್ಶನ’
ಪುತ್ತೂರು, ನ.1: ಮೇನಾಲದ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ‘ಪ್ರಾಜೆಕ್ಟ್ ವರ್ಕ್ ವಸ್ತು ಪ್ರದರ್ಶನ’ ಕಾರ್ಯಕ್ರಮ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಸಂಚಾಲಕ ಕೆ.ಅಬೂಬಕರ್ ಹಾಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಹಾಗೂ ಇದರಿಂದ ಮಕ್ಕಳ ಸೃಜನಶೀಲತೆ ಹಾಗೂ ಬೌದ್ದಿಕ ಬೆಳವಣಿಗೆ ವೃದ್ದಿಸುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಧುರಾ, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಮಿತಾ ಅಜಿತ್ ಹಾಗೂ ಸದಸ್ಯರು, ಆಡಳಿತಾಧಿಕಾರಿ ಮುಹಮ್ಮದ್ ಸಾಮು, ಕ್ಯಾಂಪಸ್ ನಿರ್ದೇಶಕ ಅಬ್ದುಲ್ಲಾ ಮಧುರಾ, ಮುಖ್ಯ ಶಿಕ್ಷಕಿ ಮಮತಾ, ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್ ಕೆ., ಶಿಕ್ಷಕಿಯರಾದ ಶ್ರೀ ಪ್ರಿಯಾ, ಅರ್ಚನಾ, ರೇಶ್ಮಾ, ನಿಶಾನ, ಶಿಕ್ಷಕೇತರ ವೃಂದದವರಾದ ಹನ್ನತ್, ಅಶ್ವಿನಿ, ರೋಹಿಣಿ, ಸುಶೀಲಾ, ರೋಹಿಣಿ, ಇಬ್ರಾಹೀಂ, ರಿತೀಶ್, ಇಸ್ಮಾಯೀಲ್, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
ಶಾಲಾ ನಾಯಕಿ ಆಯಿಷತ್ ಸನಾ, ಉಪನಾಯಕ ಶಾಮಿಲ್ ಮಧುರಾ ಹನೀಫ್, ಫಾತಿಮತ್ ಮುನಾ, ಫಾತಿಮತ್ ಮುಬಶ್ಶಿರಾ, ಅಬಾದ್ ಶಾನಿದ್ ಸಹಕರಿಸಿದರು.