ಫಲಾಹ್ ಬಾಲಕಿಯರ ಪ.ಪೂ.ವಿಭಾಗ ಆರಂಭ
ಮಂಗಳೂರು, ಮೇ 17: ಕಳೆದ 28ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೆ.ಸಿ. ರೋಡ್ ವಿದ್ಯಾನಗರ ತಲಪಾಡಿಯ ಫಲಾಹ್ ಎಜುಕೇಶನ್ ಸೊಸೈಟಿ ಸ್ಥಳೀಯ ಗ್ರಾಮೀಣ ಬಾಲಕಿಯರಿಗೆ ವಿದ್ಯಾಭ್ಯಾಸ ಮುಂದುವರಿಸಲು ಪೂರಕವಾಗುವಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಾಲಕಿಯರ ಪದವಿ ಪೂರ್ವ ಕಾಲೇಜನ್ನು ಆರಂಭಿಸಲು ಕರ್ನಾಟಕ ಸರಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದಿರುತ್ತದೆ.
ವಾಣಿಜ್ಯ ಮತ್ತು ಕಲಾ ವಿಭಾಗದ ಪದವಿ ಪೂರ್ವ ಶಿಕ್ಷಣ ಪಡೆಯಲಿಚ್ಛಿಸುವವರು ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story