ಖಾಝಿ ವಿರುದ್ಧ ವಾಟ್ಸಾಪ್ನಲ್ಲಿ ಸಂದೇಶ ರವಾನೆ ಆರೋಪ: ದೂರು ದಾಖಲು
ಮಂಗಳೂರು, ಜ.10: ವಾಟ್ಸ್ ಆ್ಯಪ್ ಗ್ರೂಪ್ ಒಂದರಲ್ಲಿ ಖಾಝಿ ವಿರುದ್ಧ ಉದ್ರಿಕ್ತ ಸಂದೇಶಗಳನ್ನು ಹಾಕಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ನಗರದ ಕುತ್ತೆತ್ತೂರು ಪೋಸ್ಟ್ ಆಫೀಸ್ ಬಳಿ ನಿವಾಸಿ ಹಸನ್ ಎಂ.ಎಚ್. ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಡಿ.31ರಂದು ‘ಸುನ್ನಿ ಐಕ್ಯ ಗ್ರೂಪ್’ ಎಂಬ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಖಾಝಿಯವರ ವಿರುದ್ಧ ಉದ್ರಿಕ್ತ ಸಂದೇಶಗಳುಳ್ಳ ಸ್ಕ್ರೀನ್ ಶಾಟ್ಗಳನ್ನು ರವಾನಿಸಿದ ಆರೋಪಕ್ಕೆ ಸಂಬಂಧಿಸಿ ಕಲಂ 153(ಎ), 114, 124(ಎ), 505(1) ಐಪಿಸಿಯಂತೆ ಮಂಗಳೂರು ಉತ್ತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story