ಆಡು ಕಾಣೆ: ದೂರು ದಾಖಲು
ಬಂಟ್ವಾಳ, ಮೇ 21: ಮನೆಯ ಅಂಗಳದಲ್ಲಿ ಕಟ್ಟಿ ಹಾಕಿದ್ದ ಆಡೊಂದು ರಾತ್ರಿ ಬೆಳಗಾಗುವುದರ ನಡುವೆ ಕಾಣೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಳಂತೂರು ಗ್ರಾಮದ ಬಂಗಾರಕೋಡಿ ನಿವಾಸಿ ಹಸೈನಾರ್ ಎಂಬವರು ತಮ್ಮ ಮನೆಯ ಅಂಗಳದಲ್ಲಿ ಐದು ಆಡುಗಳನ್ನು ಕಟ್ಟಿ ಹಾಕಿದ್ದು ಬೆಳಗ್ಗೆ ನೋಡಿದಾಗ ಒಂದೂವರೆ ವರ್ಷ ಪ್ರಾಯದ ಆಡೊಂದು ನಾಪತ್ತೆಯಾಗಿತ್ತು.
ಕಾಣೆಯಾಗಿರುವ ಆಡು ಬಿಳಿ ಹಾಗೂ ಕೆಂಪು ಮಿಶ್ರಿತ ಬಣ್ಣವನ್ನು ಹೊಂದಿದ್ದು ಇದನ್ನು ಕಳ್ಳರು ಕಳವುಗೈದಿರುವುದಾಗಿ ಅವರು ಶಂಕಿಸಿದ್ದಾರೆ.
Next Story