ಜುಮಾ ನಮಾಝ್ ಇಲ್ಲದ 7ನೆ ‘ಶುಕ್ರವಾರ’
ಮಂಗಳೂರು, ಮೇ 8: ಲಾಕ್ಡೌನ್ಗೆ ಪೂರಕವಾಗಿ ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸದಂತೆ ರಾಜ್ಯ ಸರಕಾರ, ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಖಾಝಿಗಳ ನಿರ್ದೇಶನದಂತೆ ಮೇ 8ರ ‘ಶುಕ್ರವಾರ’ ಮಧ್ಯಾಹ್ನವೂ ಜುಮಾ ನಮಾಝ್ ನಿರ್ವಹಿಸದೆ ಮುಸ್ಲಿಮರು ತಮ್ಮ ಮನೆಗಳಲ್ಲೇ ಲುಹರ್ ನಮಾಝ್ ನಿರ್ವಹಿಸಿದರು.
ಮಾ.27 ಮತ್ತು ಎ.3 ಹಾಗೂ ಎ.10, ಎ.17, ಎ.24. ಮೇ 1ರ ‘ಶುಕ್ರವಾರ’ವನ್ನು ಜುಮಾ ನಮಾಝ್ ಇಲ್ಲದೆ ಕಳೆದಿದ್ದ ಮುಸ್ಲಿಮರು ಮೇ 8ರ 7ನೇ ಶುಕ್ರವಾರ ಕೂಡ ಜುಮಾ ನಮಾಝ್ ನಿರ್ವಹಿಸದೆ ಸರಕಾರದ ನಿಯಮಾವಳಿಯನ್ನು ಪಾಲಿಸಿದರು.
ದ.ಕ. ಜಿಲ್ಲೆಯ ಯಾವುದೇ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝ್ ಇರಲಿಲ್ಲ. ಮಸೀದಿಗಳ ಇಮಾಮ್ ಮತ್ತು ಮುಅದ್ಸಿನ್ ಹಾಗೂ ಇತರ ಸಿಬ್ಬಂದಿ ವರ್ಗವು ಮಸೀದಿಯಲ್ಲಿ ಮತ್ತು ಸಮುದಾಯದ ಇತರರು ಮನೆಯಲ್ಲಿ ಲುಹರ್ ನಮಾಝ್ ನಿರ್ವಹಿಸಿ ಸಮಾಜದ ಸರ್ವರ ಹಿತ ಕಾಪಾಡುವುದರೊಂದಿಗೆ ಕಾನೂನಿಗೆ ಗೌರವ ನೀಡಿ ಗಮನ ಸೆಳೆದರು.
ಈಗಾಗಲೆ ನಗರದ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಶುಕ್ರವಾರವು ನಗರ ಮತ್ತು ಗ್ರಾಮೀಣ ಎಂಬ ವ್ಯತ್ಯಾಸವಿಲ್ಲದೆ ಸಾಮೂಹಿಕ ನಮಾಝ್ಗೆ ಹೇರಲಾದ ನಿರ್ಬಂಧವನ್ನು ಪಾಲಿಸಿದರು.
ಮಾ.13ರ ಶುಕ್ರವಾರದ ಜುಮಾ ನಮಾಝ್ನಲ್ಲಿ ನಾಝಿಲತ್ ಕುನೂತ್ ಪಠಿಸಲಾಗಿದ್ದರೆ, ಮಾ.20ರ ಶುಕ್ರವಾರದ ಜುಮಾ ನಮಾಝ್-ಪ್ರಾರ್ಥನೆಯನ್ನು ಚುಟುಕುಗೊಳಿಸಲಾಗಿತ್ತು. ಮಾ.27 ಮತ್ತು ಎ.3, ಎ.10,ಎ.17, ಎ.24. ಮೇ 1, ಮೇ 8ರ ಶುಕ್ರವಾರ ಕೂಡ ಖಾಝಿಗಳ ನಿರ್ದೇಶನದಂತೆ ಜುಮಾ ನಮಾಝ್ ನಿರ್ವಹಿಸದೆ ನೆಲದ ಕಾನೂನನ್ನು ಗೌರವಿಸಿದರು.