ಕಾಸರಗೋಡು : ಕೊರೋನ ಭೀತಿ; ಅ.16ರ ತನಕ 144 ನಿಷೇಧಾಜ್ಞೆ ಮುಂದುವರಿಕೆ; ಜಿಲ್ಲಾಧಿಕಾರಿ
ಕಾಸರಗೋಡು : ಸಂಪರ್ಕದಿಂದ ಕೊರೋನ ಹರಡುತ್ತಿರುವ ಹಿನ್ನಲೆಯಲ್ಲಿ ಮಂಜೇಶ್ವರ , ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಪರಪ್ಪ , ಒಡೆಯಂಚಾಲ್ , ಪನತ್ತಡಿ ಪೇಟೆಗಳಲ್ಲಿ ವಿಧಿಸಲಾಗಿದ್ದ 144 ನಿಷೇಧಾಜ್ಞೆಯನ್ನು ಅಕ್ಟೋಬರ್ 16 ರ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ಆದೇಶ ನೀಡಿದ್ದಾರೆ .
ಕೊರೋನ ಸೋಂಕು ಹರಡುತ್ತಿದ್ದು , ಈ ಹಿನ್ನಲೆಯಲ್ಲಿ ಕೇರಳದಲ್ಲಿ ಅಕ್ಟೋಬರ್ 3 ರಿಂದ 31 ರ ತನಕ ನಿಷೇಧಾಜ್ಞೆ ಜಾರಿಗೆ ತರಲಾಗಿದ್ದು , ಕಾಸರಗೋಡಿನಲ್ಲಿ ನಿಷೇಧಾಜ್ಞೆ ಯಲ್ಲಿ ಅಲ್ಪ ವಿನಾಯಿತಿ ನೀಡಲಾಗಿತ್ತು . ಮೊದಲ ಹಂತದಲ್ಲಿ ಅ. 9 ರ ತನಕ ನಿಷೇಧಾಜ್ಞೆ ಘೋಷಿಸಲಾಗಿತ್ತು . ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಅ.16 ರ ತನಕ ವಿಸ್ತರಿಸಲಾಗಿದೆ.
Next Story