ನಕಲಿ ನೋಟು ಮಾರಾಟ ಮಾಡಲು ಯತ್ನ : ನಾಲ್ವರು ಆರೋಪಿಗಳು ಸೆರೆ
ಉಳ್ಳಾಲ : ಕಾರೊಂದರಲ್ಲಿ ನಕಲಿ ನೋಟುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ನಾಲ್ಕು ಮಂದಿಯನ್ನು ಉಳ್ಳಾಲ ಪೊಲೀಸರು ಬೀಚ್ ಬಳಿ ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬಂಧಿತರನ್ನು ಹಕೀಬ್, ಫೈಝಲ್ ಖಾನ್, ಜಮಾನ್, ಹಾರಿಸ್ ಎಂದು ಗುರುತಿಸಲಾಗಿದ್ದು, ಸಲೀಂ ಹಾಗೂ ರಂಜಿತ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಕಾರು, 5 ಮೊಬೈಲ್ ಫೋನ್ ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story