ಮಾಸ್ಕ್: 27 ಸಾವಿರ ರೂ. ದಂಡ ವಸೂಲಿ
ಉಡುಪಿ, ಅ.18: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ಒಟ್ಟು 270 ಮಂದಿಯಿಂದ 27 ಸಾವಿರ ರೂ. ದಂಡವನ್ನು ಅ.17ರಂದು ವಸೂಲಿ ಮಾಡಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ 11,800 ರೂ., ಪಂಚಾಯತ್ ವ್ಯಾಪ್ತಿಯಲ್ಲಿ 2,200 ರೂ., ಪೊಲೀಸ್ ಇಲಾಖೆ 12,600 ರೂ., ಅಬಕಾರಿ ಇಲಾಖೆ 200 ರೂ., ಕಂದಾಯ ಇಲಾಖೆ 200 ರೂ. ದಂಡ ವಸೂಲಿ ಮಾಡಿದೆ. ಹೀಗೆ ಈವರೆಗೆ ಜಿಲ್ಲೆಯಲ್ಲಿ ಒಟ್ಟು 11,748 ಮಂದಿಯಿಂದ 13,16,350 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story