ಅ. 26ರಿಂದ ಮಂಗಳೂರು-ಬೆಂಗಳೂರು ನಡುವೆ ವಿಮಾನ ಪುನರಾರಂಭ
ಮಂಗಳೂರು, ಅ.24: ಮಂಗಳೂರು ಮತ್ತು ಬೆಂಗಳೂರಿನ ನಡುವೆ ಅ.26ರಿಂದ ಏರ್ ಇಂಡಿಯಾ ವಿಮಾನಗಳು ಪುನಃ ಸಂಚರಿಸಲಿವೆ ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.
ಫ್ಲೈಟ್ ಎಐ 575 ಬೆಂಗಳೂರು ವಿಮಾನ ನಿಲ್ದಾಣದಿಂದ ಸಂಜೆ 4 ಗಂಟೆಗೆ ನಿರ್ಗಮಿಸಲಿದ್ದು, ಸಂಜೆ 5:20ಕ್ಕೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲಪಲಿದೆ.
ಫ್ಲೈಟ್ ಎಐ 576 ಮಂಗಳೂರಿನಿಂದ ಸಂಜೆ 6 ಗಂಟೆಗೆ ಹೊರಟು ಸಂಜೆ 7:20ಕ್ಕೆ ತಲುಪಲಿದೆ. ವಿಮಾನಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸಲಿವೆ. ಪ್ರಯಾಣ ದರವು 2,342 ರೂ.ನಿಂದ ಆರಂಭವಾಗಲಿದೆ ಎಂದು ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story