ಸಂಗೀತ ಪರೀಕ್ಷೆಗೆ 118 ವಿದ್ಯಾರ್ಥಿಗಳು ಹಾಜರು
ಉಡುಪಿ, ನ.21: ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ನಡೆದ ಸಂಗೀತ, ನೃತ್ಯ, ತಾಳ ವಾದ್ಯ ಲಿಖಿತ ಪರೀಕ್ಷೆಯಲ್ಲಿ 151 ವಿದ್ಯಾರ್ಥಿಗಳ ಪೈಕಿ 118 ಮಂದಿ ಪರೀ್ಷೆಗೆ ಹಾಜರಾಗಿದ್ದಾರೆ.
ಇಂದು ಕರ್ನಾಟಕ ಸಂಗೀತ ಸೀನಿಯರ್ ಗ್ರೇಡ್ ಇನ್ಸ್ಟ್ರುಮೆಂಟ್ಸ್, ಹಿಂದೂಸ್ತಾನಿ ತಾಳವಾದ್ಯ ಜೂನಿಯರ್ ಗ್ರೇಡ್, ಭರತ ನಾಟ್ಯ ಜೂನಿಯರ್ ಹಾಗೂ ಸಿನೀಯರ್ಗ್ರೇಡ್, ಭರತನಾಟ್ಯ ವಿದ್ವಾತ್ ವಿಷಯದ ಕುರಿತು ಲಿಖಿತ ಪರೀಕ್ಷೆ ನಡೆಯಿತು.
ಪರೀಕ್ಷೆ ಕೇಂದ್ರದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಸಿಬಂದಿಗಳು ನಾಲ್ಕು ಥರ್ಮಲ್ ಸ್ಕಾನಿಂಗ್ ಬಳಸಿ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ ಬಳಿಕ ಪರೀಕ್ಷೆ ಬರೆಯಲು ಅನುಮತಿ ನೀಡಲಾಯಿತು. ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿತ್ತು. ನಾಳೆ ನಡೆಯುವ ಪರೀಕ್ಷೆಯಲ್ಲಿ 673 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಉಡುಪಿ ಡಯೇಟ್ ಉಪನ್ಯಾಸಕ ವೆಂಕಟೇಶ್ ತಿಳಿಸಿದ್ದಾರೆ.
Next Story