ಉಡುಪಿ: ಉಪನ್ಯಾಸಕಿ ಸುಮಾಗೆ ಹಂಪಿ ಕನ್ನಡ ವಿವಿಯಿಂದ ಪಿಎಚ್ಡಿ ಪದವಿ
ಉಡುಪಿ, ನ.24: ‘ಮಿಶನರಿಗಳು ರೂಪಿಸಿದ ಕನ್ನಡ ಪಠ್ಯಗಳ ರಚನೆ ಮತ್ತು ಸ್ವರೂಪ’ ಎಂಬ ವಿಷಯದ ಕುರಿತು ಸುಮಾ ಎಸ್. ಮಂಡಿಸಿರುವ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ.
ಸುಮಾ ಕನ್ನಡ ವಿ.ವಿ.ಯ ಭಾಷಾಧ್ಯಯನ ವಿಭಾಗದ ಡಾ.ಮಹದೇವಯ್ಯ ನವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಇವರು ಪ್ರಸ್ತುತ ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು ಹಾಗೂ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Next Story