ಮುರುಡೇಶ್ವರ : ಸಮುದ್ರದಲ್ಲಿ ಮುಳುಗಿ ಯುವಕ ಮೃತ್ಯು
ಭಟ್ಕಳ : ಮುರುಡೇಶ್ವರದ ಸಮುದ್ರದಲ್ಲಿ ಬೆಂಗಳೂರಿನ ಯುವಕನೋರ್ವ ಮುಳುಗಿ ಸಾವನ್ನಪ್ಪಿರುವ ಘಟನೆ ರವಿವಾರ ನಡೆದಿದೆ.
ಮೃತ ಯುವಕನನ್ನು ಬೆಂಗಳೂರಿನ ಬಾಣಸಂದ್ರ ನಿವಾಸಿ ಮಂಜುನಾಥ್ ವೆಂಕಟೇಶ್ ಮಡಿವಾಳ (20) ಎಂದು ಗುರುತಿಸಲಾಗಿದೆ.
ತನ್ನ ಏಳು ಮಂದಿ ಸ್ನೇಹಿತರೊಂದಿಗೆ ಈಜುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮಂಜುನಾಥ್ ಬೆಂಗಳೂರಿನಲ್ಲಿ ವೈದ್ಯಕೀಯ ಸೇವೆಯಲ್ಲಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿರುವ ಅವರ ಕುಟುಂಬ ಸದಸ್ಯರಿಗೆ ಘಟನೆ ಕುರಿತಂತೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story