ಡಿ.1ರಂದು ಎಮ್ ಮೀಡಿಯಾ ಚಾನಲ್ ಶುಭಾರಂಭ
ಬಂಟ್ವಾಳ: ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ನಚ್ಚಬೆಟ್ಟು ಇದರ ಅಧೀನದಲ್ಲಿ ಲೋಕಾರ್ಪಣೆಗೊಳಿಸಲಾದ ಎಮ್ ಮೀಡಿಯಾ ಡಿಜಿಟಲ್ ಸ್ಟುಡಿಯೋ ಇದರ ಚಾನಲ್ ಶುಭಾರಂಭವು ನಾಳೆ ಡಿ.1ರಂದು ರಾತ್ರಿ 9 ಗಂಟೆಗೆ ನಡೆಯಲಿದೆ.
ಎಮ್ ಮೀಡಿಯಾ ಸಂಸ್ಥಾಪಕರಾದ ಟಿ. ಎಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಆಟ್ಟಕ್ಕೋಯ ತಂಙಳ್ ಕುಂಬೋಲ್ ಶುಭ ನುಡಿಯಲಿದ್ದಾರೆ. ಅಲ್ಲದೆ ಪ್ರಮುಖ ಗಾಯಕರಾದ ಮಸೂದ್ ಸಅದಿ ಗಂಡಿಬಾಗಿಲು, ಅನಸ್ ಹಿಮಮಿ ಜೋಗಿಬೆಟ್ಟು, ನೌಫಲ್ ಅಡ್ಕರೆಪಡ್ಪು, ನವಾಝ್ ಸರಳಿಕಟ್ಟೆ, ಇರ್ಶಾದ್ ಮೂಳೂರು ಇವರಿಂದ ಬೈತ್ ಹಾಗೂ ನಅತ್ ಆಲಾಪನೆ ನಡೆಯಲಿದೆ ಎಂದು ದಾರುಲ್ ಮುಸ್ತಫಾ ಮ್ಯಾನೇಜರ್ ಎಂ.ಎಂ ಮಹರೂಫ್ ಸುಲ್ತಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Next Story