ಎಸ್ಸೆಸ್ಸೆಫ್ ಕೋಟೆಪುರ ಶಾಖೆ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಕೋಟೆಪುರ ಶಾಖೆ ವಾರ್ಷಿಕ ಮಹಾಸಭೆ ಯೂನಿಟ್ ಅಧ್ಯಕ್ಷ ಇರ್ಫಾನ್ ರವರ ಮನೆಯಲ್ಲಿ ನಡೆಯಿತು.
ಸಭೆಗೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಮದನಿ ರವರ ದುಆ ಮೂಲಕ ಚಾಲನೆ ನೀಡಲಾಯಿತು. ಯುನಿಟ್ ಪ್ರಧಾನ ಕಾರ್ಯದರ್ಶಿ ಸಾಹಿಲ್ ವರದಿ ಮಂಡಿಸಿದರು. ಹಣಕಾಸು ಕಾರ್ಯದರ್ಶಿ ಫೈಸಲ್ ಕೋಟೆಪುರ ಅವರು ವಾರ್ಷಿಕ ಲೆಕ್ಕಪತ್ರ ವನ್ನು ಮಂಡಿಸಿದರು. ನಂತರ ಮುಝಮ್ಮಿಲ್ ಮದನಿ ತರಗತಿ ನಡೆಸಿಕೊಟ್ಟರು.
ಬಳಿಕ ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ಫೈಝಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾಯಿಝ್, ಹಣಕಾಸು ಕಾರ್ಯದರ್ಶಿಯಾಗಿ ಮುಹಮ್ಮದ್ ಸಾಹಿಲ್, ಉಪಾಧ್ಯಕ್ಷರಾಗಿ ಇರ್ಫಾನ್ ಕೋಟೆಪುರ, ಜೊತೆ ಕಾರ್ಯದರ್ಶಿಯಾಗಿ ಫಯಾಜ್ ಕೋಟೆಪುರ, ಕ್ಯಾಂಪುಸ್ ಕಾರ್ಯದರ್ಶಿಯಾಗಿ ಅಶ್ವಿದ್ ಕೋಟೆಪುರ, ರೈನ್ಬೋ ಕನ್ವೀನರ್ ಆಗಿ ಅಶ್ಫಾಕ್ ಕೋಟೆಪುರ, ಮೀಡಿಯಾ ಕನ್ವೀನರ್ ಆಗಿ ಸೈಫುಲ್ಲಾ ಕೋಟೆಪುರ ಆಯ್ಕೆಯಾದರು ಹಾಗೂ 5 ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಸೆಲೆಕ್ಷನ್ ಆಫೀಸರ್ ಹಾಶಿರ್ ಕೋಡಿ, ಡಿವಿಷನ್ ನಾಯಕ ಮುಝಮ್ಮಿಲ್ ಕೋಟೆಪುರ ಉಪಸ್ಥಿತರಿದ್ದರು.
ಯುನಿಟ್ ಪ್ರಧಾನ ಕಾರ್ಯದರ್ಶಿ ಸಾಹಿಲ್ ಸ್ವಾಗತಿಸಿದರು.