ಉಡುಪಿ: ಪಿಯುಸಿ ಶೇ.80.5, ಎಸೆಸೆಲ್ಸಿ ಶೇ.83.6 ಹಾಜರಾತಿ
ಉಡುಪಿ, ಜ.16: ಜಿಲ್ಲೆಯಲ್ಲಿ ಶನಿವಾರ ದ್ವಿತೀಯ ಪಿಯುಸಿಯಲ್ಲಿ ಶೇ. 80.52ರಷ್ಟು ಹಾಗೂ ಎಸೆಸೆಲ್ಸಿಯಲ್ಲಿ ಶೇ.83.6ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ವಿದ್ಯಾಗಮದಲ್ಲಿ 7ನೇ ತರಗತಿಯ ಶೇ.61.6 ರಷ್ಟು ಶಾಲೆಗೆ ಆಗಮಿಸಿದ್ದಾರೆ ಎಂದು ಜಿಲ್ಲಾ ವಿದ್ಯಾಂಗ ಇಲಾಖೆಗಳು ಮಾಹಿತಿ ನೀಡಿವೆ.
ಮತ್ತೊಬ್ಬ ಶಿಕ್ಷಕ ಪಾಸಿಟಿವ್: ಪ್ರಾಥಮಿಕ ಶಾಲೆಯ ಇನ್ನೊಬ್ಬ ಶಿಕ್ಷಕರು ಕೊರೋನಕ್ಕೆ ಪಾಸಿಟಿವ್ ಬಂದಿದ್ದು, ಈ ಮೂಲಕ ಜಿಲ್ಲೆ ಯಲ್ಲಿ ಪಾಸಿಟಿವ್ ಬಂದ 6ನೇ ಶಿಕ್ಷಕ ಇವರಾಗಿದ್ದಾರೆ. ಪ್ರಾಥಮಿಕ ಶಾಲೆಗಳ ನಾಲ್ವರು ಹಾಗೂ ಪ್ರೌಢ ಶಾಲೆಗಳ ಇಬ್ಬರು ಶಿಕ್ಷಕರು ಇದುವರೆಗೆ ಪಾಸಿಟವ್ ಬಂದಂತಾಗಿದೆ. ಇದರೊಂದಿಗೆ ಪ್ರೌಢ ಶಾಲೆಯ ಒಬ್ಬ ಸಿಬ್ಬಂದಿಯೂ ಪಾಸಿಟಿವ್ ಬಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5552 ಶಿಕ್ಷಕರು ಹಾಗೂ 954 ಶಾಲಾ ಸಿಬ್ಬಂದಿಗಳು ಆರ್ಟಿ ಪಿಸಿಆರ್ ಪರೀಕ್ಷೆಗೊಳಗಾಗಿದ್ದಾರೆ.
Next Story