ತಾಯಿ, ಮಗು ನಾಪತ್ತೆ
ಉಡುಪಿ, ಜ.21: ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ಬಾಳಿಗಾ ಫಿಶ್ನೆಟ್ ಕಂಪೌಂಡ್ ಬಳಿಯ ನಿವಾಸಿ ಲಕ್ಷ್ಮೀ (28) ಎಂಬ ಮಹಿಳೆ ತನ್ನ 3 ವರ್ಷದ ಮಗಳಾದ ಸಿಂಧು ಜೊತೆಗೆ ಜ.18ರಿಂದ ಕಾಣೆಯಾಗಿದ್ದಾರೆ.
ಚಹರೆ: ಕಾಣೆಯಾದ ಮಹಿಳೆಯು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಬಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ಯನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story