ಬ್ಯಾಂಕ್ ಉದ್ಯೋಗಿ ನಾಪತ್ತೆ
ಮಂಗಳೂರು, ಜ.22: ಬಿಜೈ ಸಮೀಪದ ಬ್ಯಾಂಕ್ವೊಂದರಲ್ಲಿ ಉದ್ಯೋಗಿಯಾಗಿದ್ದ ವಿಶಾಲ್ ಕುಮಾರ್ ಎಂಬವರು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ.
ವಿಶಾಲ್ ಕುಮಾರ್ ಜ.17ರಂದು ಪೂಜಾ ಕಾರ್ಯಕ್ರಮಕ್ಕಾಗಿ ತನ್ನ ಪತ್ನಿಯ ತಾಯಿ ಮನೆಯಿರುವ ಮೂಡುಬಿದಿರೆ ಅಲಂಗಾರಿಗೆ ತೆರಳಿದ್ದರು. ಜ.21ರಂದು ಬೆಳಗ್ಗೆ ಪತ್ನಿಯ ತಾಯಿ ಮನೆಯಿಂದ ಬೆಳಗ್ಗೆ 7:30ಕ್ಕೆ ಬ್ಯಾಂಕ್ಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ಆದರೆ ಬ್ಯಾಂಕ್ಗೆ ಹೋಗದೆ, ಮನೆಗೂ ವಾಪಸಾಗದೆ ನಾಪತ್ತೆಯಾಗಿದ್ದಾರೆ ಎಂದು ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story