ಎಸೆಸೆಲ್ಸಿ ಇಂಗ್ಲಿಷ್ ವಿಷಯದ ಕುರಿತು ಫೋನ್ ಇನ್
ಉಡುಪಿ, ಜ.22: ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಎಸೆಸೆಲ್ಸಿ ದ್ವಿತೀಯ ಭಾಷೆ ಇಂಗ್ಲೀಷ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮ ಇಂದು ನಡೆಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಕ್ಕಳ ಕರೆಗಳನ್ನು ಸ್ವೀಕರಿಸಿ ನಿರಂತರವಾಗಿ ಅಧ್ಯಯನ ಮಾಡಲು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಸುಪ್ರೀತಾ ಕೆ., ಸಂದ್ಯಾ ಎಸ್., ಶ್ಯಾಮಿಲಿ, ರಮ್ಯ, ಫಾನ್ಸಿಸ್ ಡಿಸಿಲ್ವ ವಿದ್ಯಾರ್ಥಿಗಳ ಒಟ್ಟು 198ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ ಹಾಗೂ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್, ಜಾಹ್ನವಿ, ನಾಗರಾಜ್, ರಾಘವ ಶೆಟ್ಟಿ, ಬಿ.ಟಿ.ನಾಯಕ ಮೊದಲಾದವರು ಹಾಜರಿದ್ದರು.
Next Story