ಬಿಸಿ ಸಾಂಬಾರು ಮೈಮೇಲೆ ಬಿದ್ದು ಮಹಿಳೆ ಮೃತ್ಯು
ಕುಂದಾಪುರ, ಜ.25: ಮುಂಬೈಯ ಕ್ಯಾಂಟಿನ್ನಲ್ಲಿ ಬಿಸಿ ಸಾಂಬಾರು ಮೈಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಗುಜ್ಜಾಡಿಯ ಸಂತೋಷ್ ಎಂಬವರ ಪತ್ನಿ ಕಲಾವತಿ(37) ಎಂದು ಗುರುತಿಸಲಾಗಿದೆ. ಇವರು ಪತಿಯೊಂದಿಗೆ ಮುಂಬೈಯಲ್ಲಿ ಕ್ಯಾಂಟೀನ್ ವ್ಯವಹಾರ ನಡೆಸಿಕೊಂಡಿದ್ದರು. ಜ.10ರಂದು ಇವರು ಬಿಸಿ ಸಾಂಬಾರನ್ನು ಗ್ಯಾಸ್ ಒಲೆಯಿಂದ ಇಳಿಸುವಾಗ ಪಿಟ್ಸ್ ಬಂದು ಸಾಂಬಾರು ಮೈಮೇಲೆ ಬಿತ್ತೆನ್ನಲಾಗಿದೆ.
ಇದರಿಂದ ಗಂಭೀರ ಸುಟ್ಟಗಾಯಗೊಂಡು ಮುಂಬೈಯ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇವರು ಜ.24ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story