ಮಂಗಳೂರು: ಉದ್ಯಮಿಗಳ ಮನೆ, ಆಸ್ಪತ್ರೆ, ಕಚೇರಿಗಳಿಗೆ ಐಟಿ ದಾಳಿ
ಮಂಗಳೂರು, ಫೆ.17: ನಗರದ ಇಬ್ಬರು ಪ್ರತಿಷ್ಠಿತ ಉದ್ಯಮಿಗಳ ಮನೆ, ಆಸ್ಪತ್ರೆ ಹಾಗೂ ಕಚೇರಿಗಳಿಗೆ ಮಂಗಳೂರಿನ ಐಟಿ ಅಧಿಕಾರಿಗಳ ಆರು ಪ್ರತ್ಯೇಕ ತಂಡ ಬುಧವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ನಗರದ ಎ.ಜೆ. ಅಸ್ಪತ್ರೆ ಮತ್ತು ಯೆನೆಪೊಯ ಆಸ್ಪತ್ರೆಗೆ ಹಾಗೂ ಅದರ ಮಾಲಕರ ಮನೆ ಮತ್ತು ಕಚೇರಿಗಳಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಐಟಿ ಅಧಿಕಾರಿಗಳ ತಂಡವು ಎಜೆ ಆಸ್ಪತ್ರೆಯ ಮಾಲಕರ ಮನೆಗೆ ದಾಳಿ ನಡೆಸಿದೆ. ಅಲ್ಲದೆ ಮಂಗಳೂರು ಮತ್ತು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಗೂ ಅದರ ಮಾಲಕರ ಮನೆಗೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
Next Story