ಮಟಪಾಡಿ: ಡಿಸೆಂಟ್ ಫ್ರೆಂಡ್ಸ್ ‘ಸ್ವರ್ಣಸ್ಮತಿ’ ಟ್ರೋಫಿ
ಬ್ರಹ್ಮಾವರ, ಫೆ. 24: ಮಟಪಾಡಿ ಸ್ವರ್ಣಸ್ಮತಿ ಆಶ್ರಯದಲ್ಲಿ ಇತ್ತೀಚೆಗೆ ಮಟಪಾಡಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಕೂಟ ಸ್ವರ್ಣಸ್ಮತಿ ಟ್ರೋಫಿಯನ್ನು ಡಿಸೆಂಟ್ ಫ್ರೆಂಡ್ಸ್ ಗೆದ್ದುಕೊಂಡಿದೆ.
ಫ್ರೆಂಡ್ಸ್ ಮಟಪಾಡಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು. ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಡಿಸೆಂಟ್ನ ಶ್ರೀಕಾಂತ್, ಉತ್ತಮ ದಾಂಡಿಗ ಫ್ರೆಂಡ್ಸ್ ಮಟಪಾಡಿಯ ರಾಘವೇಂದ್ರ ಹಾಗೂ ಉತ್ತಮ ಬೌಲರ್ ಧೀರಾಜ್ ಪಡೆದರು. ಒಟ್ಟು 8 ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಹಂದಾಡಿ ಗ್ರಾಪಂ ಸದಸ್ಯ ಅಶೋಕ್ ಪೂಜಾರಿ, ಸ್ವರ್ಣ ಸ್ಮೃತಿ ಗೌರವಾಧ್ಯಕ್ಷ ಕೆ.ಪಿ.ಇಬ್ರಾಹಿಂ, ಅಧ್ಯಕ್ಷ ಸಂತೋಷ್ ಲುವಿಸ್, ಉದ್ಯಮಿ ಸುರೇಶ್ ಕರ್ಕೇರಾ, ಸುಜಯ್ ನಾಯಕ್, ಸ್ಯಾಮ್ಸನ್ ಸಿಕ್ವೇರ ಮತ್ತು ಸ್ವರ್ಣಸ್ಮತಿ ಸದಸ್ಯರು ಉಪಸ್ಥಿತರಿದ್ದರು.
ಶರತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
Next Story